HomeGadag Newsನಿರ್ದಿಷ್ಟ ಕ್ರಮದಲ್ಲಿ ಯೋಗಾಭ್ಯಾಸ ಮಾಡಿ

ನಿರ್ದಿಷ್ಟ ಕ್ರಮದಲ್ಲಿ ಯೋಗಾಭ್ಯಾಸ ಮಾಡಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಶಾಲಾ-ಕಾಲೇಜು ಸೇರಿದಂತೆ ವಿವಿಧೆಡೆ ಶನಿವಾರ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

ಪಟ್ಟಣ ಪಂಚಾಯಿತಿಯಲ್ಲಿ ಬೆಳಗ್ಗೆ ಪೌರ ಕಾರ್ಮಿಕರಿಗಾಗಿ ಯೋಗ ತರಬೇತಿಯನ್ನು ಏರ್ಪಡಿಸಲಾಗಿತ್ತು. ಯೋಗ ಶಿಕ್ಷಕ ವಿ.ಎ. ಕುಂಬಾರ ಮಾತನಾಡಿ, ಯೋಗವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಭಾರತೀಯ ಮೂಲದ ವ್ಯಾಯಾಮ ಮತ್ತು ಆರೋಗ್ಯ ನಿರ್ವಹಣೆಗೆ ಬಹಳ ಪರಿಣಾಮಕಾರಿಯಾದ ಚಟುವಟಿಕೆಯಾಗಿದೆ. ವೇದ ಸಾಹಿತ್ಯದಲ್ಲಿ ಯೋಗದ ಉಲ್ಲೇಖವಿದೆ ಮತ್ತು ಶತಮಾನಗಳಿಂದ ಸಂತರು ಮತ್ತು ಆಧ್ಯಾತ್ಮಿಕ ಗುರುಗಳು ಯೋಗಾಭ್ಯಾಸ ಮಾಡುತ್ತಿದ್ದ ಇತಿಹಾಸವಿದೆ. ಪಾಶ್ಚಿಮಾತ್ಯ ಜಗತ್ತಿಗೆ ಯೋಗದ ಪರಿಕಲ್ಪನೆಯನ್ನು ವಿವರಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಯೋಗವನ್ನು ಅಭ್ಯಾಸ ಮಾಡುವವರು ಪ್ರತಿದಿನ ಸರಿಯಾದ ರೀತಿಯಲ್ಲಿ ಮತ್ತು ನಿರ್ದಿಷ್ಟ ಅನುಕ್ರಮದಲ್ಲಿ ಈ ಆಸನಗಳನ್ನು ಅಭ್ಯಸಿಸಬೇಕಾಗುತ್ತದೆ. ಪರಿಣಿತ ಗುರುಗಳ ಅಥವಾ ತರಬೇತುದಾರರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡುವುದು ಸೂಕ್ತ ಎಂದರು.

ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಆರೋಗ್ಯ ನಿರೀಕ್ಷಕ ರಕ್ಷತ, ನೀಲಪ್ಪ ಚಳ್ಳಮರದ, ಮಹಾದೇವ ಮ್ಯಾಗೇರಿ, ದುರ್ಗಪ್ಪ ಪಾದಗಟ್ಟಿ, ಪರಸಪ್ಪ ನಡವಲಕೇರಿ, ಕುಮಾರ ನಡವಲಕೇರಿ, ನಾಗರಾಜ ಚಳ್ಳಮರದ, ನಾಗರಾಜ ಗೋರ್ಕಿ, ಸತ್ಯಪ್ಪ ಚಳ್ಳಮರದ, ವೀರಪ್ಪ ಹೊಂಬಳ, ನಿಂಗಪ್ಪ ಚಳ್ಳಮರದ, ಜಮೀಲಾ ಬಂಕಾಪೂರ ಸೇರಿಂದತೆ ಸಿಬ್ಬಂದಿಗಳು ಇದ್ದರು.

ಕೆಜಿಎಸ್ ಶಾಲೆಯಲ್ಲಿ: ಪಟ್ಟಣದ ಕೆಜಿಎಸ್ ಶಾಲೆಯಲ್ಲಿ ಶನಿವಾರ ಯೋಗದಿನವನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕ ಬಸವರಾಜ ಕುರಿ ಮಾತನಾಡಿ, ಮಕ್ಕಳಿಗೆ ಯೋಗದಿಂದ ನಮಗೆ ಯಾವುದೇ ರೋಗಗಳು ಬರದಂತೆ ತಡೆಯಬಹುದು. ನಿರಂತರ ಯೋಗಾಭ್ಯಾಸದಿಂದ ದೈಹಿಕ ಸಾಮರ್ಥ್ಯ ವರ್ಧನೆ, ಒತ್ತಡದಿಂದ ಮುಕ್ತಿ ಮತ್ತು ವಿಶ್ರಾಂತಿಗೆ ಸಹಾಯ ಮಾಡುತ್ತದೆ. ಸ್ನಾಯು ಬಲವನ್ನು ಸುಧಾರಿಸುತ್ತದೆ. ರಕ್ತ ಪರಿಚಲನೆ ಉತ್ತಮಗೊಳಿಸುತ್ತದೆ. ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಮೂಳೆ ಮತ್ತು ಕೀಲುಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಹೃದಯ ಬಡಿತವನ್ನು ಉತ್ತಮಗೊಳಿಸುತ್ತದೆ. ಗಮನ ಮತ್ತು ಏಕಾಗ್ರತೆಗೆ ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಯೋಗವನ್ನು ಮಡುವ ಮೂಲಕ ಸದೃಢ ಆರೋಗ್ಯವನ್ನು ಹೊಂದಬೇಕು ಎಂದರು.

ಎA.ಎಸ್. ಮಾಳಶೆಟ್ಟಿ, ಎಲ್.ಎನ್. ಚೌಹಾನ, ಡಿ.ವಿ. ಕಳ್ಳಿ, ಎಂ.ಎಸ್. ಮಾಳಶೆಟ್ಟಿ, ಜೆ.ಎ. ಪಾಟೀಲ, ಎಸ್.ಐ. ಜಗಾಪುರ, ಲಕ್ಷ್ಮೀ ವಡ್ಡರ, ರಾಜೇಶ್ವರಿ ತೊಂಡೆಹಾಳ ಸೇರಿದಂತೆ ಇತರರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!