HomeGadag Newsಜನೌಷಧಿ ಕೇಂದ್ರದ ಲಾಭ ಪಡೆಯಿರಿ : ಡಾ. ಚಂದ್ರು ಲಮಾಣಿ

ಜನೌಷಧಿ ಕೇಂದ್ರದ ಲಾಭ ಪಡೆಯಿರಿ : ಡಾ. ಚಂದ್ರು ಲಮಾಣಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಬಡವರು, ಜನಸಾಮಾನ್ಯರಿಗೂ ಕಡಿಮೆ ಬೆಲೆಯಲ್ಲಿ ಔಷಧ ಲಭ್ಯವಾಗಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶಾದ್ಯಂತ ಜನೌಷಧ ಕೇಂದ್ರಗಳನ್ನು ಪ್ರಾರಂಭಿಸಿದೆ.

ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಅವರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಜನೌಷಧ ಕೇಂದ್ರದಲ್ಲಿ ಹಾಗೂ ಇತರ ಔಷಧ ಅಂಗಡಿಗಳಲ್ಲಿ ದೊರೆಯುವ ಔಷಧಿಗಳು ಒಂದೇ ಆಗಿರುತ್ತವೆ. ಆದರೆ ಬೇರೆ ಬೇರೆ ಹೆಸರು ಹೊಂದಿರುತ್ತವೆ. ಖಾಸಗಿ ಔಷಧಂಗಡಿಯಲ್ಲಿ ನೂರಾರು ರೂ ಕೊಟ್ಟು ಖರೀದಿಸುವ ಔಷಧಿ ಇಲ್ಲಿ ಕಡಿಮೆ ಸಿಗುತ್ತದೆ. ಇದರಿಂದ ಅನೇಕ ಬಡವರು/ಜನಸಾಮಾನ್ಯರಿಗೆ ಸಾಕಷ್ಟು ಅನಕೂಲವಾಗುತ್ತದೆ. ಮುಖ್ಯವಾಗಿ ಮಧುಮೇಹಿಗಳು, ರಕ್ತದೊತ್ತಡ, ಹೃದಯರೋಗ, ಜ್ವರ, ನೆಗಡಿ, ಕೆಮ್ಮು, ಗರ್ಭಿಣಿಯರು ಸೇರಿ ಚಿಕ್ಕಮಕ್ಕಳಿಗೆ ಜನೌಷಧಿ ಕೇಂದ್ರದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಔಷಧಿ ಸಿಗುತ್ತವೆ.

ಆದ್ದರಿಂದ ಔಷಧ ಅಗತ್ಯ ಇರುವವರು ಈ ಕೇಂದ್ರದ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ನಗರ ಘಟಕದ ಅಧ್ಯಕ್ಷ ನವೀನ ಬೆಳ್ಳಟ್ಟಿ, ಆಡಳಿತ ವೈದ್ಯಾಧಿಕಾರಿ ಡಾ. ಶ್ರೀಕಾಂತ ಕಾಟೇವಾಲೆ, ಗಿರೀಶ ಅಗಡಿ, ವಿಜಯ ಮೆಕ್ಕಿ, ಸಿದ್ದು ಸವಣೂರ, ನವೀನ ಬೆಳ್ಳಟ್ಟಿ, ದುಂಡೇಶ ಕೊಟಗಿ, ಗಿರೀಶ ಚೌರಡ್ಡಿ, ರಂಗಣ್ಣ ಬದಿ, ಅಶೋಕ ಶಿರಹಟ್ಟಿ, ಅನೀಲ ಮುಳಗುಂದ, ವಿಜಯ ಬೂದಿಹಾಳ, ಐ.ಕೆ ಹೊನ್ನಪ್ಪನವರ, ದೇವಪ್ಪ ನಂದೆಣ್ಣವರ, ವಿಶಾಲ ಬಟಗುರ್ಕಿ ಸೇರಿ ಹಲವರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!