ಹುಬ್ಬಳ್ಳಿ:- ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಮರ ವಿರುದ್ಧವಾಗಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಮರ ವಿರುದ್ಧವಾಗಿಲ್ಲ. ಕಾಂಗ್ರೆಸ್ ನಾಯಕರಿಗೆ ರಾಜಕೀಯವಾಗಿ ಹಿನ್ನಡೆ ಆಗುತ್ತೆ ಅಂತ ಮಸೂದೆಗೆ ವಿರೋಧ ಮಾಡ್ತಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ರಾಜಾ ಮಾತೆ ಸುಪುತ್ರ ರಾಹುಲ್ ಗಾಂಧಿ ಈ ಹಿಂದೆ ಬಿಲ್ ಹರಿದು ಹಾಕಿದ್ದಾರೆ. ಅವರು ಈ ಬಿಲ್ ಬಗ್ಗೆ ಮಾತನಾಡುತ್ತಾರೆ.
ಮೋದಿ ಸರ್ಕಾರ ಅಸಂವಿಧಾನಕವಾಗಿ ಬಿಲ್ ಮಂಡನೆ ಮಾಡಿಲ್ಲ. ಬಿಹಾರ ಚುನಾವಣೆಯಲ್ಲಿ ಇದರ ಪ್ರಭಾವ ಗೊತ್ತಾಗುತ್ತದೆ ಎಂದರು. ವಕ್ಫ್ ಬಿಲ್ ಮುಸ್ಲಿಮರ ವಿರುದ್ಧ ಇಲ್ಲ. 39 ಲಕ್ಷ ಎಕರೆಗೆ 168 ಕೋಟಿ ರೆವೆನ್ಯೂ ಬರ್ತಾ ಇದೆ. ಕರ್ನಾಟಕದಲ್ಲಿ 54 ಸಾವಿರ ಎಕರೆ ವಕ್ಫ್ ಜಮೀನಿದೆ. ಈ ಆಸ್ತಿಯನ್ನ ಸರಿಯಾಗಿ ಬಳಸಿದರೆ, ಸಚ್ಛರ ಕಮೀಟಿ ವರದಿ ಪ್ರಕಾರ 12 ಸಾವಿರ ಕೋಟಿ ಆದಾಯ ಬರ್ತಿತ್ತು. ಇದರಲ್ಲಿ ದುರಪಯೋಗ, ಸ್ವಜನ ಪಕ್ಷಪಾತ ಇದೆ, ಆಸ್ತಿ ನುಂಗ್ತಾ ಇದ್ದಾರೆ. ಆದ್ದರಿಂದ ನಾವೆಲ್ಲ ವಿಚಾರ ಮಾಡಿ ಬಿಲ್ ತಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.


