ಹುಬ್ಬಳ್ಳಿ: ಪ್ರತಾಪ್ ಸಿಂಹನಿಗೆ ಸಂವಿಧಾನ, ಪ್ರಜಾಪ್ರಭುತ್ವ ಮೇಲೆ ಗೌರವ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪ್ರತಾಪ್ ಸಿಂಹ ಒಬ್ಬ ಮಹಾನ್ ಕೋಮುವಾದಿ, ಕೋಮುವಾದಿಗಳಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಪ್ರತಾಪ್ ಸಿಂಹನಿಗೆ ಸಂವಿಧಾನ, ಪ್ರಜಾಪ್ರಭುತ್ವ ಮೇಲೆ ಗೌರವ ಇಲ್ಲ. ಕೋಮುವಾದ ಮಾಡೋದೇ ಅವರ ಕಸುಬು, ಜಾತಿ, ಕೋಮುವಾದ ಮಾಡಿ ರಾಜಕೀಯದಲ್ಲಿ ಬದುಕಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಇನ್ನೂ ಉಪಚುನಾವಣೆ ಪ್ರಚಾರಕ್ಕಾಗಿ 2 ದಿನ ಶಿಗ್ಗಾಂವಿಗೆ ಬಂದಿದ್ದೇನೆ. ನಾನು ಈ ಹಿಂದೆ ಕ್ಷೇತ್ರದ ಪ್ರಚಾರ ಮಾಡಿದ್ದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಪ್ರಚಾರಕ್ಕೆ ಬಂದಿರಲಿಲ್ಲ. ಕೊನೆಯ ಕ್ಷಣದಲ್ಲಿ ಅಭ್ಯರ್ಥಿ ಮಾಡಿದ್ವಿ, ಆದರೂ ಕೂಡ ನಾವು ಗೆದ್ದೇ ಗೆಲ್ಲುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ನಮಗೆ ಲೀಡ್ ಬಂದಿದೆ. ಈಗಲೂ ಲೀಡ್ ಬರುವ ಸ್ಥಿತಿ ಇದೆ ಎಂದರು.
ವಕ್ಫ್ ವಿಚಾರವಾಗಿ ಮಾತನಾಡಿ, ಬಿಜೆಪಿ ಯಾವತ್ತೂ ಸುಳ್ಳು ಆರೋಪ ಮಾಡುತ್ತಾರೆ. ರಾಜಕಾರಣ ಮಾಡಲು ಪ್ರತಿಭಟನೆ ಮಾಡುತ್ತಾರೆ. ಸಮಸ್ಯೆ ಎಲ್ಲಿದೆ? ಈಗ ಅವರೇ ವಿರುದ್ಧವಾಗಿ ಮಾತನಾಡುತ್ತಾರೆ. ಅವರೇ ಹೇಳಿದ ಮಾತಿನಿಂದ ಉಲ್ಟಾ ಹೊಡೆದಿದ್ದಾರೆ. ಅವರ ಇಡೀ ಪಕ್ಷ ರಾಜಕಾರಣಕ್ಕಾಗಿ ಮಾತನಾಡುತ್ತಾರೆ. ವಕ್ಫ್ ಆಸ್ತಿ ಇವತ್ತಿಂದಲ್ಲ, ಅವರ ಕಾಲದಲ್ಲಿ ಕೂಡಾ ನೋಟಿಸ್ ಕೊಟ್ಟಿದ್ದಾರೆ. ನಾವು ರದ್ದು ಮಾಡಬೇಕು ಎಂದು ಸಭೆ ಮಾಡಿದ್ದೇವೆ. ಆದರೆ ಯಾವುದೇ ಧರ್ಮದವರಾಗಿಯೂ, ಯಾವ ರೈತರೂ ಕೂಡ ಒಕ್ಕಲೆಬ್ಬಿಸಬಾರದು ಎಂದು ಹೇಳಿದರು.