ಬೆಂಗಳೂರು:– ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ತಡೆ ಕೋರಿ ಹೈಕೋರ್ಟ್ ಗೆ ಪ್ರತಾಪ್ ಸಿಂಹ ಅರ್ಜಿ ಸಲ್ಲಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಪಾಪ ಅವರದ್ದು ರಾಜಕೀಯ. ಬಿಜೆಪಿಯವರು ಪ್ರತಾಪ್ ಸಿಂಹನನ್ನು ಕಿತ್ತು ಬಿಸಾಕಿದ್ದಾರೆ. ನಾನು ಬದುಕಿದ್ದೀನಿ ಅಂತಾ ತೋರಿಸಿಕೊಳ್ಳಬೇಕು. ಅದಕ್ಕೆ ಪಾಪ ಪ್ರಯತ್ನ ಪಡ್ತಿದ್ದಾರೆ. ಬಿಜೆಪಿಯವರಿಗೆ ಬೇರೆ ಏನೂ ವಿಚಾರ ಇಲ್ಲ. ಮಹದಾಯಿ, ಮೇಕೆದಾಟಿಗೆ ಪರ್ಮಿಷನ್ ಕೊಡಿಸಲಿ. ಕೃಷ್ಣ ಯೋಜನೆಗೆ ಪರ್ಮಿಶನ್ ಕೊಡಿಸಲಿ. ದೆಹಲಿಗೆ ಹೋಗಿ ಅನುದಾನ ಕೊಡಿಸಲಿ. ಕೇವಲ ಪ್ರಚಾರಕ್ಕೋಸ್ಕರ ಮಾಡ್ತಿದ್ದಾರೆ, ಬಾಯಿ ಮುಚ್ಕೊಂಡು ಇರಬೇಕು ಎಂದು ವಾಗ್ದಾಳಿ ನಡೆಸಿದರು.
ಧರ್ಮಸ್ಥಳಕ್ಕೆ ನ್ಯಾಯ ಒದಗಿಸಿಕೊಡ್ತಿರೋದು ನಾವು. ಧರ್ಮಸ್ಥಳದಲ್ಲಿ ಅವರದ್ದು ಎರಡು ಗುಂಪು ಇವೆ. ಅವರಿಂದಲೇ ಇದೆಲ್ಲಾ ಆಗ್ತಿರೋದು. ಆ ಬುರುಡೆ ಗಿರಾಕಿ ಯಾರವನು? ಅವರು ಯಾರು ಅಂತಾ ಬಿಜೆಪಿಯವರು ಹೇಳಿಕೊಳ್ಳೋಕೆ ಆಗ್ತಿಲ್ಲ. ಅವರೆಲ್ಲಾ ಬಿಜೆಪಿಯವರು. ಧರ್ಮಸ್ಥಳಕ್ಕೆ ಅವಮಾನ, ಅನ್ಯಾಯ ಆಗಿದೆಯಂದ್ರೆ ಬಿಜೆಪಿಯ ನಾಯಕರಿಂದ, ಅವರ ಸಂಘಟನೆಯಿಂದ ಎಂದು ಆರೋಪಿಸಿದರು.