ಹಾಸನ: ಅಡ್ಜೆಸ್ಟ್​ಮೆಂಟ್​ ರಾಜಕಾರಣದ ವಿರುದ್ಧ ಮತ್ತೆ ಪ್ರತಾಪ್ ಸಿಂಹ ಘರ್ಜನೆ!

0
Spread the love

ಹಾಸನ:- ಅಡ್ಜೆಸ್ಟ್​ಮೆಂಟ್​ ರಾಜಕಾರಣದ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮತ್ತೆ ಘರ್ಜಿಸಿದ್ದಾರೆ.

Advertisement

ಈ ಬಗ್ಗೆ ಮಾತನಾಡಿದ ಅವರು, ನಾನು ಆ ಪಕ್ಷ, ಈ ಪಕ್ಷ ಅಂಥ ಹೇಳುತ್ತಿಲ್ಲ. ಎಲ್ಲಾ ಪಕ್ಷದ ಹಿರಿಯ ನಾಯಕರು ಹೊಂದಾಣಿಕೆ ರಾಜಕೀಯದಲ್ಲಿ ಇದ್ದಾರೆ. ಇಲ್ಲ ಎಂದರೆ ಮುಡಾದಲ್ಲಿ ಬಿಜೆಪಿ-ಜೆಡಿಎಸ್​ನವರದ್ದು ಇದೆ ಎಂದು ಹೇಳುತ್ತಾರೆ.

ಕಾಂಗ್ರೆಸ್‌ನವರು ಏಕೆ ಬಿಡಿತ್ತಿಲ್ಲ. ಅವರು ಮಾಡಿರುವ ಆರೋಪಗಳಿಗೆ ಕಾಂಗ್ರೆಸ್‌ನವರು ಒಂದು ಸಾಕ್ಷಿನಾದರೂ ಕೊಟ್ಟಿದ್ದಾರಾ? ತನಿಖಾ ಏಜೆನ್ಸಿ ಅವರ ಹತ್ತಿರವೇ ಇದೆ. ಆಡಳಿತ, ಪೊಲೀಸ್ ವ್ಯವಸ್ಥೆ ಅವರ ಬಳಿಯೇ ಇದೆ. 40% ಹಗರಣದ ಬಗ್ಗೆ ತನಿಖೆ ಮಾಡಿಸಿ. ಪಿಎಸ್‌ಐ ಹಗರಣದ ಬಗ್ಗೆ ಏಕೆ ತನಿಖೆ ಮಾಡಿಸುತ್ತಿಲ್ಲ.

ಪ್ರೀಯಾಂಕ್ ಖರ್ಗೆ ನನ್ನ ಹತ್ರ ದಾಖಲೆ‌ ಇದೆ ಅಂತ ಹೇಳಿಕೆ‌ ಕೊಟ್ಟಿದ್ರಲ್ಲಾ ಕೊಡಪ್ಪ ಇವಾಗ. ಇಟ್ಟುಕೊಂಡು ಏನು ಮಾಡುತ್ತಿದ್ದೀರಾ ನೀವು ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕ ಸರ್ಕಾರವೇ ನಿಮ್ಮ ಕೈಯಲ್ಲಿ ಇದೆ. ಯಾವ್ಯಾವ ಹಗರಣದ ಇದೆ ಎಲ್ಲಾ ತೆಗೆದುಕೊಂಡು ಬನ್ನಿ. ಹಿರಿಯ ರಾಜಕಾರಣಿಗಳು ಏನಿದ್ದೀರಿ ಒಬ್ಬಬ್ಬರನ್ನು ಒಬ್ಬೊಬ್ಬರು ಎಕ್ಸ್‌ಪೋಸ್ ಮಾಡಿಕೊಳ್ಳಿ. ಕನಿಷ್ಠ ಮುಂದಿನ ತಲೆಮಾರಿಗಾದರೂ ಒಳ್ಳೆಯ ರಾಜಕಾರಣಿಗಳು ಬರಲು ಅವಕಾಶ ಆಗುತ್ತೆ ಎಂದು ಗುಡುಗಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ನನಗೆ ಗೊತ್ತಿಲ್ಲ. ಕಾಂಗ್ರೆಸ್​ನ ತೀರ್ಮಾನ ಏನು ಅಂತ ನನಗೆ ಗೊತ್ತಿಲ್ಲ. ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರೆ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿಯಬೇಕಾಗುತ್ತೆ. ನ್ಯಾಯಾಲಯದ ತೀರ್ಮಾನ ಏನಾಗುತ್ತೋ ಗೊತ್ತಿಲ್ಲ. ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬಹುದು. ಅದನ್ನು ಬಿಟ್ಟು ಕಾನೂನಿನಲ್ಲಿ ಒತ್ತಾಯ ಮಾಡಲಾಗಲ್ಲ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here