ವಿಜಯಸಾಕ್ಷಿ ಸುದ್ದಿ, ಗದಗ: ಬೆಟಗೇರಿಯ ಭಾವಸಾರ ಕ್ಷತ್ರಿಯ ಸಮಾಜವು ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಾಗೂ ಸ್ಕಾಲರ್‌ಶಿಪ್ ವಿತರಣಾ ಸಮಾರಂಭವನ್ನು ಬೆಟಗೇರಿಯ ಹಿಂಗುಲಾಂಬಿಕಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಏರ್ಪಡಿಸಿತ್ತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಟಗೇರಿಯ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಗಣಪತರಾವ್ ಬೇಂದ್ರೆ ಮಾತನಾಡಿ, ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಅವರೆಲ್ಲರೂ ಅಭಿನಂದನಾರ್ಹರು. ಪಾಲಕ-ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಹಾಗೂ ಉನ್ನತ ಶಿಕ್ಷಣ ನೀಡಲು ಮುಂದಾಗಬೇಕು ಎಂದರು.
ವೇದಿಕೆಯ ಮೇಲೆ ಕಾರ್ಯದರ್ಶಿ ವಿನಾಯಕ ಹಂಚಾಟೆ, ಉಪಾಧ್ಯಕ್ಷ ರಾಜು ಕಪಟಕರ, ಜನಾರ್ಧನ ಹವಳೆ, ತುಕಾರಾಮ ಪತಂಗೆ, ಡಾ. ಹರೀಶ ವೈಕುಂಠೆ ಉಪಸ್ಥಿತರಿದ್ದರು. ಸಮಾರಂಭದಲ್ಲಿ ವೈದ್ಯಕೀಯ ಬಿಡಿಎಸ್ ವ್ಯಾಸಂಗ ಮುಗಿಸಿದ ಡಾ. ಹರೀಶ ವೈಕುಂಠೆ ಸೇರಿದಂತೆ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.