ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಪ್ರಮುಖ ಘಟ್ಟವಾಗಿದೆ. ವಿದ್ಯಾರ್ಥಿಗಳು ಓದುವ ಆಸಕ್ತಿ ಬೆಳೆಸಿಕೊಂಡು ಉತ್ತಮ ಅಂಕ ಪಡೆದು, ಶಾಲೆಯ ಹಾಗೂ ಜಗತ್ತಿನ ಕೀರ್ತಿ ಹೆಚ್ಚಿಸಬೇಕು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವತಿಯಿಂದ ನೀಡಲಾಗುವ ಪ್ರತಿಭಾ ಪುರಸ್ಕಾರದಿಂದ ವಿದ್ಯಾರ್ಥಿಗಳ ಓದಿಗೆ, ಶಿಕ್ಷಣಕ್ಕೆ ಅನುಕೂಲಕವಾಗಲಿ ಎಂದು ಕೆವಿಜಿ ಬ್ಯಾಂಕ್‌ನ ಪ್ರಾದೇಶಿಕ ಸಹಾಯಕ ವ್ಯವಸ್ಥಾಪಕರಾದ ಪ್ರಕಾಶ ಎ ಹೇಳಿದರು.
ಅವರು ನಗರದ ತೋಂಟದಾರ್ಯ ಮಠದ ಹತ್ತಿರ ಇರುವ ಕೆವಿಜಿ ಬ್ಯಾಂಕ್ ಪ್ರಧಾನ ಶಾಖೆಯ ಕಚೇರಿಯಲ್ಲಿ ಪರಿಶಿಷ್ಟ ಜಾತಿ ಪಂಗಡಗಳ 8, 9 ಹಾಗೂ 10ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿನಿಯರಿಗೆ ತಲಾ 5 ಸಾವಿರ ರೂಪಾಯಿಗಳ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವತಿಯಿಂದ ಗದಗ ತಾಲೂಕಿನ ಹೊಂಬಳ, ಅಸುಂಡಿ, ಬಿಂಕದಕಟ್ಟಿ, ಹುಲಕೋಟಿ, ಕುರ್ತಕೋಟಿ, ಹರ್ತಿ, ಸೊರಟೂರ, ಡಂಬಳ ಮುಂಡರಗಿ ಸುತ್ತಮುತ್ತಲಿನ ಗ್ರಾಮದಲ್ಲಿ ಸುಮಾರು 60 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿಲಾಯಿತು.
ಪ್ರಾದೇಶಿಕ ಕಛೇರಿ ಅಧಿಕಾರಿ ಶ್ರೀಪಾದರಾಜ ಹೊಂಬಳ ಮಾತನಾಡಿದರು. ಈ ಸಂದರ್ಭದಲ್ಲಿ ವೈಭವ ಅಗರವಾಲ್, ಎಂ.ಆರ್. ನಾಯ್ಕ, ಎಸ್.ಜಿ. ಕುಲುಮಿ ಸೇರಿದಂತೆ ಗದಗ ತಾಲೂಕಿನ ಕೆವಿಜಿ ಬ್ಯಾಂಕ್‌ನ ವಿವಿಧ ಶಾಖೆಯ ವ್ಯವಸ್ಥಾಪಕರು, ಪಾಲಕರು, ಸಾರ್ವಜನಿಕರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.