ವಿಜಯಸಾಕ್ಷಿ ಸುದ್ದಿ, ಗದಗ: ಪ್ರಯಾಗರಾಜ್‌ದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಗದಗ ನಗರದ ಎಪಿಎಂಸಿ ವಾಕಿಂಗ್ ಮಿತ್ರರು ಹಾಗೂ ಗದಗ ಜಿಮಖಾನಾ ಕ್ಲಬ್ ಸದಸ್ಯರಾದ ಚಂದ್ರಶೇಖರ ಸುರಕೋಡ, ಶಂಕ್ರಪ್ಪ ಶಾನಭೋಗರ, ಸಿದ್ರಾಮಪ್ಪ ಉಮಚಗಿ, ಗಂಗಣ್ಣ ಮುನವಳ್ಳಿ, ಸಂಪತ್‌ಕುಮಾರ ಹುಣಸಿಕಟ್ಟಿ, ಕೆ.ಎಸ್. ಕೋರಿಮಠ, ಅಶೋಕ ಪಾಟೀಲ, ಪ್ರಕಾಶ ಉಗಲಾಟದ, ಮುರುಘರಾಜೇಂದ್ರ ಬಡ್ನಿ, ಉಮೇಶ ನಾಲ್ವಾಡ, ಮಧುಸೂಧನ ಪುಣೇಕರ, ಚನ್ನವೀರಪ್ಪ ಹುಣಸಿಕಟ್ಟಿ, ರಾಜು , ಉಮೇಶ ಹೂಗಾರ, ಸಂಜಯ ಬಾಗಮಾರ, ವಿಜಯಕುಮಾರ ಶಿವಪ್ಪಗೌಡ್ರ ಇವರುಗಳು ಜ.12ರಂದು ಪ್ರಯಾಣ ಬೆಳೆಸಿ ಯಶಸ್ವಿ ಯಾತ್ರೆ ಮುಗಿಸಿ ಮರಳಿದರು.
ಇದರ ಪ್ರಯುಕ್ತ ಗದಗ ನಗರದ ಎಪಿಎಂಸಿಯಲ್ಲಿರುವ ಕಲ್ಮೇಶ್ವರ ಟ್ರೇಡಿಂಗ್ ಕಂಪನಿಯ ಮಾಲಕರು, ಹುಬ್ಬಳ್ಳಿ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾದ ಗಂಗಣ್ಣ ಗಾಣಿಗೇರ ಇವರ ಅಂಗಡಿಯಲ್ಲಿ ಸಭೆಯನ್ನು ಸೇರಲಾಗಿತ್ತು. ಈ ಸಂದರ್ಭದಲ್ಲಿ ಗಂಗಣ್ಣ ಗಾಣಿಗೇರ ಯಶಸ್ವಿಯಾಗಿ ಪ್ರಯಾಗರಾಜ್ ಪುಣ್ಯಸ್ನಾನ ಮಾಡಿ ಬಂದಿದ್ದಕ್ಕೆ ಪ್ರೀತಿಯ ಭೋಜನದ ವ್ಯವಸ್ಥೆಯನ್ನು ಮಾಡಿ ಅಭಿನಂದನೆ ಸಲ್ಲಿಸಿದರು.
ಗಂಗಾಧರ ಮುನವಳ್ಳಿಯವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ತಾತನಗೌಡ ಪಾಟೀಲ, ಮಾಜಿ ಅಧ್ಯಕ್ಷ ಸಂಗಮೇಶ ದುಂದೂರ, ಶರಣಪ್ಪ ಕುರಡಗಿ, ಎ.ಪಿ.ಎಂ.ಸಿ. ದಲಾಲ ಅಸೋಸಿಯೇಷನ್ ಮಾಜಿ ಅಧ್ಯಕ್ಷ ವಸಂತಗೌಡ ಪೊಲೀಸ್‌ಪಾಟೀಲ, ಶ್ರೀಕಾಂತ ಲಕ್ಕುಂಡಿ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಹನಮಂತಪ್ಪ ಚಟ್ರಿ, ಗದಗ ಜಿಮಖಾನಾ ಸದಸ್ಯರಾದ ಮಲ್ಲಣ್ಣ ದೇಸಾಯಿ, ಆಯ್.ಎಲ್. ಪಾಟೀಲ, ರಾಚಪ್ಪ ವಾಲಿ, ಮೌಲಾಲಿ ಮುಲ್ಲಣ್ಣವರ, ಬಾಪೂಜಿ ಸಂಕನಗೌಡ್ರ, ಪರಶುರಾಮ ಕನ್ಯಾಳ, ಪಂಚಾಕ್ಷರಯ್ಯ ಹಿರೇಮಠ, ಹಾದಿಮನಿ, ವಿಶ್ವನಾಥ ಯಳಮಲಿ, ಮಹಾಂತೇಶಗೌಡ ಪಾಟೀಲ, ಲಿಂಗರಾಜ ಚಿಕ್ಕನಗೌಡ್ರ, ಶಿದ್ಲಿಂಗಪ್ಪ ಹಲವಾಗಲಿ, ಸುರೇಶ ರಡ್ಡೇರ, ಶರಣು ಗದಗ, ಶರಣಪ್ಪಗೌಡ ಪವಾಡಿಗೌಡ್ರ, ಸಂಗಪ್ಪ ಪೂಜಾರ, ಪ್ರವೀಣ ಹೊರಟಪೇರ, ಶರಣಪ್ಪ ಮಪೂರ ಚಂಬಣ್ಣ ಮ್ಯಾಗೇರಿ, ಮಹೇಶ ಗಾಣಿಗೇರ ಸೇರಿದಂತೆ ಗದಗ ಎ.ಪಿ.ಎಂ.ಸಿ.ಯ ವ್ಯಾಪಾರಸ್ಥರು, ಕೋಳಿವಾಡ ಗ್ರಾಮದ ಹಿರಿಯರು ಇದ್ದರು.
ಚೇಂಬರ್ ಆಫ್ ಕಾಮರ್ಸ್ನ ಮಾಜಿ ಅಧ್ಯಕ್ಷರಾದ ಮಧುಸೂಧನ ಪುಣೇಕರ ಮಾತನಾಡಿ, ಪ್ರಯಾಗರಾಜ್ ಪುಣ್ಯಸ್ನಾನದ ಜೊತೆಗೆ ಅಯೋಧ್ಯೆಯ ಶ್ರೀರಾಮಚಂದ್ರನ ದರ್ಶನ, ಕಾಶಿಯಲ್ಲಿ ವಿಶ್ವನಾಥನ ದರ್ಶನವಾಗಿದೆ ಎಂದರಲ್ಲದೆ, ಪ್ರಯಾಣದ ಸಂದರ್ಭದಲ್ಲಿ ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಿದ ಡಾ. ಗೋಡಬೋಲೆಯವರಿಗೆ ಧನ್ಯವಾದ ತಿಳಿಸಿದರು.