ಕಾರ್ಗಿಲ್ ವಿಜಯೋತ್ಸವದ ಪೂರ್ವಭಾವಿ ಸಭೆ

0
Pre-Kargil Victory Meeting
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬಿಜೆಪಿ ಗದಗ ಜಿಲ್ಲಾ ಯುವ ಮೋರ್ಚಾ ವತಿಯಿಂದ ಜುಲೈ 25, 26ರಂದು ನಡೆಯಲಿರುವ 25ನೇ ಕಾರ್ಗಿಲ್ ವಿಜಯ ದಿವಸದ ನಿಮಿತ್ತ ಪೂರ್ವಭಾವಿ ಸಭೆ ನಡೆಸಲಾಯಿತು.

Advertisement

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈರಣ್ಣ ಅಂಗಡಿ ಎಲ್ಲಾ ಯುವ ಮೋರ್ಚಾ ಕಾರ್ಯಕರ್ತರೊಂದಿಗೆ ವ್ಯವಸ್ಥೆಗಳನ್ನು ಸಿದ್ಧಪಡಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ತಿಳಿಸಿದರು.

ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಂತೋಷ ಅಕ್ಕಿ ಮಾತನಾಡಿ, ಗದಗ ಜಿಲ್ಲೆಯ ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿ 25ನೇ ಕಾರ್ಗಿಲ್ ವಿಜಯೋತ್ಸವದ ಜಾಗೃತಿ ಮೂಡಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಕಾಶ ಕೊತಂಬ್ರಿ, ಶಿವಾನಂದ ಬಂಡಿ, ನಾಗರಾಜ ನವಲಿ, ಶಿವು ಕುರಿ, ಅರುಣಮಠ, ನವೀನ ಕುರ್ತಕೋಟಿ, ಶಕ್ತಿ ಕತ್ತಿ, ಸುರೇಶ ಚವ್ಹಾಣ, ರಾಹುಲ ಸಂಕಣ್ಣವರ, ವಿರೂಪಾಕ್ಷಪ್ಪ ಹಸಬಿ, ದರ್ಮರಾಜ ಕೊಂಚಿಗೇರಿ, ವೀರಣ್ಣ ಅಂಗಡಿ, ವರುಣ ಬೆಲ್ಲದ, ಅವಿನಾಶ ಹೊನಗುಡಿ, ಕಾಳು ತೋಟದ, ಸುನೀಲ ಕುರ್ತಕೋಟಿ, ವಿರೇಶಪ್ರಭು ಗದುಗಿನ್, ಕಾರ್ತಿಕ ಮುತ್ತಿನಪೆಂಡಿಮಠ, ಕಿರಣ ಕಲಾಲ, ಅಪ್ಪು ನಮಸ್ತೆಮಠ, ಸಚಿನ್ ಮಡಿವಾಳರ ಸೇರಿದಂತೆ ಯುವ ಮೋರ್ಚಾದ ಎಲ್ಲಾ ಜಿಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.


Spread the love

LEAVE A REPLY

Please enter your comment!
Please enter your name here