ವಿಜಯಸಾಕ್ಷಿ ಸುದ್ದಿ, ಗದಗ: ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಗದಗ-ಬೆಟಗೇರಿ ನಗರದ ಗ್ರಾಮ ದೇವತೆಯರಾದ ದ್ಯಾಮಮ್ಮ ಹಾಗೂ ದುರ್ಗಮ್ಮ ಹರಿಜಾತ್ರೆಯ ಪೂರ್ವಭಾವಿ ಸಭೆಯನ್ನು ಡಿ. 17ರಂದು ಸಾಯಂಕಾಲ 5.30 ಗಂಟೆಗೆ ಗದಗ ನಗರದ ಒಕ್ಕಲಗೇರಿ ಓಣಿಯ ಶ್ರೀ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕರೆಯಲಾಗಿದೆ.
ಗದಗ-ಬೆಟಗೇರಿ ನಗರದ ಸರ್ವ ಭಕ್ತಾದಿಗಳು ಹಾಗು ಸಾರ್ವಜನಿಕರು ಆಗಮಿಸಿ ತಮ್ಮ ಸಲಹೆ-ಸೂಚನೆಗಳನ್ನು ನೀಡಬೇಕೆಂದು ಟ್ರಸ್ಟ್ ಕಮಿಟಿಯ ಹಿರಿಯ ಸದಸ್ಯರಾದ ಎಸ್.ಎ. ಮೊರಬದ ವಕೀಲರು, ಕೊಟ್ರಪ್ಪ ಕಮತರ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



