ಯೋಗ ದಿನಾಚರಣೆ ಯಶಸ್ವಿಗೊಳಿಸಿ

0
Pre-meeting for Yoga Day
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಜೂನ್ 21ರಂದು ಜಗತ್ತಿನಾದ್ಯಂತ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಪಟ್ಟಣದಲ್ಲಿ ಯೋಗಪಟುಗಳು, ಯೋಗಾಸಕ್ತರು, ಸಾರ್ವಜನಿಕರು ವಿವಿಧ ಇಲಾಖೆಗಳೊಂದಿಗೆ ಸೇರಿ ಯಶಸ್ವಿಯಾಗಿ ನಡೆಸಲು ಪಟ್ಟಣದ ಯೋಗ ಸಾಧಕರ ಸಮಿತಿ ವತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಈ ವೇಳೆ ಮಾತನಾಡಿದ ಸಮಿತಿಯ ದಶರಥ ಕೋಟೆಗೌಡ್ರ, ಬಸವರಾಜ ಸಂಗಪ್ಪಶೆಟ್ಟರ, ಪ್ರಭಾವತಿ ಪುರಾಣಿಕಮಠ ವಿಶ್ವಕ್ಕೆ ಯೋಗದ ಮಹತ್ವವನ್ನು ನೀಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಆರೋಗ್ಯ ಮತ್ತು ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಯೋಗ ಉತ್ತಮ ಸಾಧನೆಯಾಗಿದ್ದು, ಪ್ರಾಚೀನ ಭಾರತದ ಮಹತ್ವದ ಕೊಡುಗೆಯಾಗಿರುವ ಯೋಗ ಇಂದು ಜಗತ್ತಿನಾದ್ಯಂತ ಪ್ರಚಲಿತವಾಗಿದೆ. ಪಟ್ಟಣದಲ್ಲಿ ನೂರಾರು ಜನರು ಯೋಗ ಸಾಧಕರು, ಯೋಗ ಪಟುಗಳಿದ್ದು, ಈ ನಿಟ್ಟಿನಲ್ಲಿ ಜೂ ೨೧ರಂದು ನಡೆಯುವ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಎಲ್ಲರನ್ನು ಸೇರಿಸುವ ಮೂಲಕ ಒಂದೇಡೆ ಸೇರಿ ಯೋಗ ದಿನವನ್ನು ಆಚರಿಸಲು ಎಲ್ಲರೂ ಆಸಕ್ತಿಯಿಂದ ಕಾರ್ಯ ಮಾಡೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಕಾಶ ಹುಲಬಜಾರ, ನೀಲಪ್ಪ ತೆಗ್ಗಳ್ಳಿ, ಚಂದ್ರಶೇಖರ ಪಾಟೀಲ, ಪ್ರವೀಣ ಬೆನಹಾಳ, ಪಾರ್ವತಿ ಕಳ್ಳಿಮಠ, ವಿದ್ಯಾ ಗಾಂಜಿ, ಜ್ಯೋತಿ ಸುಣಗಾರ, ಶೈಲಾ ಆದಿ, ಶಕುಂತಲಾ ಜಗಳಿ, ಸೇರಿದಂತೆ ಯೋಗ ಶಿಕ್ಷಕರು, ಸಾಧಕರು ಸಭೆಯಲ್ಲಿ ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here