ಯುವಕರ ಭವಿಷ್ಯ ಕಟ್ಟುವ ಪಕ್ಷ ಕಾಂಗ್ರೆಸ್ : ಮಿಥುನ ಜಿ.ಪಾಟೀಲ

0
Pre-meeting of Congress Membership Registration Campaign
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ : ಕಾಂಗ್ರೆಸ್ ಪಕ್ಷದ ಶಕ್ತಿ ಯೂಥ್ ಕಾಂಗ್ರೆಸ್ ಆಗಿದೆ. ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿ ಯುವಕರ ಭವಿಷ್ಯ ಕಟ್ಟುವ ನಿಟ್ಟಿನಲ್ಲಿ ಸದಾ ಚಿಂತಿಸುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಯುವ ನೇತಾರರು ಉತ್ತಮ ಸ್ಥಾನವನ್ನು ಹೊಂದಬೇಕು ಎನ್ನುವ ಹಿನ್ನೆಲೆಯಲ್ಲಿ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದ್ದು, 18ರಿಂದ 35 ವರ್ಷದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವದ ನೋಂದಣಿಯನ್ನು ಹೊಂದಲು ಮುಂದಾಗಬೇಕು ಎಂದು ರೋಣ ಪುರಸಭೆ ಉಪಾಧಕ್ಷ ಮಿಥುನ ಜಿ.ಪಾಟೀಲ್ ಕರೆ ನೀಡಿದರು.

Advertisement

ಆಗಸ್ಟ್ 20ರಿಂದ ಸೆ.20ರವರೆ ಹಮ್ಮಿಕೊಂಡಿರುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಕರೆತರಬೇಕು. ತನ್ಮೂಲಕ ಪ್ರಜಾಪ್ರಭುತ್ವ ಶಕ್ತಿಯನ್ನು ಮತ್ತು ಈ ಭಾಗದ ಜನಪ್ರಿಯ ಶಾಸಕರಾದ ಜಿ.ಎಸ್. ಪಾಟೀಲರ ಕೈ ಬಲಪಡಿಸಬೇಕು. ಯುವಕರ ಶ್ರೇಯಸ್ಸಿಗಾಗಿ, ಜನತೆಯ ಧ್ವನಿಯಾಗಿ ಸೇವೆ ಮಾಡಲು ರಾಜ್ಯಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಿಂತಿರುವ ಅಕ್ಷಯ ಐ.ಪಾಟೀಲ್ ಅವರಿಗೆ ಹೆಚ್ಚಿನ ಬೆಂಬಲವನ್ನು ನೀಡಲು ಯುವಕರು ಮುಂದಾಗಬೇಕೆಂದು ಹೇಳಿದರು.

ಮುಂಡರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ ಮಾತನಾಡಿ, ತಾಲೂಕು ಮಟ್ಟದ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಸ್ಥಾನಕ್ಕೆ ನಿಂತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವವನ್ನು ಮಾಡಿಸುವುದರ ಗೆಲುವು ನಿಮ್ಮದಾಗಲಿ. ಅಕ್ಷಯ ಪಾಟೀಲ ಅವರನ್ನು ಗದಗ ಜಿಲ್ಲೆಯಿಂದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲು ಯುವಕರು ಮುಂದಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹೇಶ ಗಡಗಿ, ಕುಮಾರಸ್ವಾಮಿ ಹಿರೇಮಠ, ಸೋಮಣ್ಣ ಗುಡ್ಡದ, ಶರಣಪ್ಪ ಶಿರುಂದ, ಕನಕಮೂರ್ತಿ ನರೇಗಲ್ಲ, ಕಾಶಪ್ಪ ಅಳವಂಡಿ, ಜಾಕೀರ ಮೂಲಿಮನಿ, ಮುತ್ತಣ್ಣ ಕೊಂತಿಕಲ್ಲ, ಬಾಬು ಮೂಲಿಮನಿ, ಮರಿಯಪ್ಪ ಸಿದ್ದಣ್ಣವರ, ಹನಮರಡ್ಡಿ ಮೇಟಿ, ಶೇಖರಗೌಡ ಪಾಟೀಲ್, ಅಮರೇಶ ಹಿರೇಮಠ, ಬಸುರಡ್ಡಿ ಬಂಡಿಹಾಳ, ಶಂಕ್ರಪ್ಪ, ರಾಮನಗೌಡ ಪಾಟೀಲ್, ಹಾಲಪ್ಪ ಹರ್ತಿ, ಬಾಬುಸಾಬ ಸರಕಾವಾಸ, ನೂರಹಮ್ಮದ ಸರಕಾವಾಸ, ಶರಣು ಬಂಡಿಹಾಳ, ಭೀಮಪ್ಪ ಗದಗಿನ, ಸುರೇಶ ಗಡಗಿ, ಮಾಂತೇಶ ಮುಗಳಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.

ಅಕ್ಷಯ ಐ.ಪಾಟೀಲ ಮಾತನಾಡಿ, ಯುವಕರ ಶ್ರೇಯೋಭಿವೃದ್ದಿಗಾಗಿ ದೇಶದಲ್ಲಿ ಸಾವಿರಾರು ಕಂಪನಿಗಳು ನೆಲೆಸುವಂತೆ ಮಾಡಿ ನೂರಾರು ಸರ್ಕಾರಿ ಸಂಸ್ಥೆಗಳನ್ನು ಕಟ್ಟಿ ಯುವಕರಿಗೆ ಉದ್ಯೋಗ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಶ್ರೇಯಸ್ಸು ಕಾಂಗ್ರೆಸ್ ಪಕ್ಷದ್ದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಎಲ್ಲ ವರ್ಗದವರೂ ಆರ್ಥಿಕವಾಗಿ ಪ್ರವಾಹಿನಿಗೆ ಬರಬೇಕು ಎನ್ನುವ ಉದ್ದೇಶದಿಂದ ಜನತೆಯ ಪರ ನಿಂತು ಶ್ರಮಿಸುತ್ತಿದ್ದಾರೆ. ಹೀಗಾಗಿ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೊಂದಣಿ ಮಾಡಿಸಿಕೊಳ್ಳುವುದರ ಮೂಲಕ ನನಗೆ ತಮ್ಮ ಮತವನ್ನು ನೀಡಲು ಮುಂದಾಗಬೇಕೆಂದು ಹೇಳಿದರು.


Spread the love

LEAVE A REPLY

Please enter your comment!
Please enter your name here