ವಿಜಯಸಾಕ್ಷಿ ಸುದ್ದಿ, ಗದಗ : ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ರಂಭಾಪುರಿ ಜಗದ್ಗುರುಗಳ ದಸರಾ ಕಾರ್ಯಕ್ರಮವು ಅಕ್ಟೋಬರ್ 3ರಿಂದ ಅಕ್ಟೋಬರ್ 13ರವರೆಗೆ ಜರಗಲಿದ್ದು, ಈ ಕಾರ್ಯಕ್ರಮಗಳ ಪೂರ್ವಭಾವಿ ಸಭೆಯನ್ನು ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಸೆ. 30ರ ಮುಂಜಾನೆ 11 ಗಂಟೆಗೆ ಕರೆಯಲಾಗಿದೆ.
ಸಭೆಯ ನೇತೃತ್ವವನ್ನು ಅಬ್ಬಿಗೇರಿ ಹಿರೇಮಠ ಹಾಗೂ ಸಿದ್ದರಬೆಟ್ಟದ ಪೂಜ್ಯರಾದ ಶ್ರೀ ಷ. ಬ್ರ. ವೀರಭದ್ರ ಶಿವಾಚಾರ್ಯ ಸ್ವಾಮಿಗಳು ವಹಿಸಿಕೊಳ್ಳುವರು. ಮುಕ್ತಿಮಂದಿರ, ಚಳಗೇರಿ, ನರಗುಂದ, ಅಡ್ನೂರ್, ತುಪ್ಪದಕುರಹಟ್ಟಿ, ಬನ್ನಿಕೊಪ್ಪ, ಸೊರಟೂರ, ಹಿರೇವಡ್ಡಟ್ಟಿ ಪೂಜ್ಯರು ಹಾಗೂ ಗದಗ ರೇಣುಕ ಮಂದಿರದ ಚಂದ್ರಶೇಖರ ದೇವರು ಉಪಸ್ಥಿತರಿರುವರು.
ಕಾರಣ ಶ್ರೀ ಜಗದ್ಗುರು ಪಂಚಪೀಠಾಭಿಮಾನಿಗಳು, ಸರ್ವ ಸದ್ಭಕ್ತರು ಈ ಸಭೆಗೆ ಆಗಮಿಸಬೇಕೆಂದು ಅಜ್ಜಣ್ಣ ಮಲ್ಲಾಡದ ಕಾರ್ಯಧ್ಯಕ್ಷರು ಶ್ರೀ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಸಂಘದ ಅಧ್ಯಕ್ಷ ಮಂಜಣ್ಣ ಬೇಲೇರಿ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿಕೊAಡಿದ್ದಾರೆ.