ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ನವೆಂಬರ್ 11ರಿಂದ 18ರವರೆಗೆ ನಾಗಾಸಾಧು ಸಹದೇವಾನಂದ ಗಿರಿಜೀ ಮಹಾರಾಜ ಜುನಾ ಆಕಾಡ ಮಂತ್ರಿ ಅವರ ನೇತೃತ್ವದಲ್ಲಿ ಜರುಗಲಿರುವ ಅತಿರುದ್ರ ಮಹಾಯಾಗ ಹಾಗೂ ಕಿರಿಯ ಕುಂಭಮೇಳ ಕಾರ್ಯಕ್ರಮದ ಕುರಿತು ಚರ್ಚಿಸಲು ಸೆ. 28ರಂದು ಮುಂಜಾನೆ 11 ಗಂಟೆಗೆ ನಗರದ ಎಸ್.ಬಿ.ಎಸ್ ಗಾರ್ಡನ್‌ನಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ಗದಗ ಜಿಲ್ಲೆಯ ವಿವಿಧ ಸಮಾಜ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು 10 ನಿಮಿಷ ಮುಂಚಿತವಾಗಿ ಆಗಮಿಸಿ, ಸಭೆಯಲ್ಲಿ ಪಾಲ್ಗೊಂಡು ಸಲಹೆ-ಸೂಚನೆ ನೀಡಲು ಅತಿರುದ್ರ ಮಹಾಯಾಗ ಹಾಗೂ ಕಿರಿಯ ಕುಂಭಮೇಳ ಸಮಿತಿಯ ಪ್ರಕಟಣೆ ವಿನಂತಿಸಿದೆ.



