ಲ್ಯಾಂಡ್ ಬ್ಯಾಂಕ್ ಜಾರಿಗೆ ಸರ್ಕಾರದಿಂದ ಸಿದ್ಧತೆ

0
Preparation by Government to implement Land Bank
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯನವರನ್ನು ಭೇಟಿ ಮಾಡಿ, ರಾಜ್ಯದ ಸ್ಲಂ ನಿವಾಸಿಗಳ ಬೇಡಿಕೆಗಳು ಹಾಗೂ ಕುಂದು-ಕೊರತೆ ಸಭೆ ಕರೆಯಲು ಸಮಾಲೋಚನೆ ನಡೆಸಲಾಯಿತು.

Advertisement

ಸ್ಲಂ ಜನಾಂದೋಲನ ಕರ್ನಾಟಕ ವಿವಿಧ ಹಕ್ಕೊತ್ತಾಯಗಳಾದ ಸಮಗ್ರ ಸ್ಲಂ ಅಭಿವೃದ್ಧಿ ಕಾಯಿದೆ, ರಾಜ್ಯ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರಗಳ ವಿತರಣೆ ಮತ್ತು ಕ್ರಯಪತ್ರಗಳ ಪ್ರಕ್ರಿಯೆ ಚುರುಕುಗೊಳಿಸುವುದು, ಕೊಳಚೆ ಪ್ರದೇಶಗಳ ಘೋಷಣೆಗೆ ಎದುರಾಗಿರುವ ತೊಡಕುಗಳನ್ನು ಸರಿಪಡಿಸುವುದು ಮತ್ತು ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶಗಳನ್ನು ಘೋಷಿಸಲು ಇರುವ ತೊಡಕನ್ನು ನಿವಾರಿಸುವುದು, ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿಗಳ ವಸತಿ ಯೋಜನೆ ಜಾರಿ ಸ್ಲಂ ನಿವಾಸಿಗಳ ಫಲಾನುಭವಿ ವಂತಿಕೆಯನ್ನು ಕಡಿತ ಮಾಡುವುದು ಸೇರಿದಂತೆ ನಗರ ಲ್ಯಾಂಡ್ ಬ್ಯಾಂಕ್ ನೀತಿ ಜಾರಿಗೊಳಿಸಿ ಜಿಲ್ಲಾ ಮಟ್ಟದಲ್ಲಿ 2016ರ ನೀತಿಯನ್ನು ಜಾರಿಗೊಳಿಸಲು ಒತ್ತಾಯಿಸಲಾಯಿತು.

ಪ್ರಸಾದ್ ಅಬ್ಬಯ್ಯ ಮನವಿ ಸ್ವೀಕರಿಸಿ ಮಾತನಾಡಿ, ರಾಜ್ಯ ಸರ್ಕಾರದಿಂದ ಘೋಷಿತ ಪ್ರದೇಶಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಚಿಂತಿಸುತ್ತಿದೆ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಸ್ಲಂ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಪಾಲು, ಸ್ಥಳೀಯ ಸಂಸ್ಥೆಗಳಲ್ಲಿ ಸೆಸ್ ಸಂಗ್ರಹ ಮಾಡಿ ಕೊಳಚೆ ಪ್ರದೇಶಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಮುಂದಾಗುತ್ತಿದ್ದೇವೆ. ರಾಜ್ಯ ಸರ್ಕಾರವೇ ವಸತಿ ಯೋಜನೆಗೆ ಹೊಸ ಹೆಸರನ್ನು ಘೋಷಿಸಲಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ಇಮ್ತಿಯಾಜ್ ಮಾನ್ವಿ, ಪದಾಧಿಕಾರಿಗಳಾದ ಜನಾರ್ಧನ್ ಹಳ್ಳಿಬೆಂಚಿ, ಶೋಭಾ ಕಮತಾರ್, ಅರುಣಾ, ರೇಣುಕಾ ಎಲ್ಲಮ್ಮ, ವೆಂಕಮ್ಮ, ರೇಣುಕಾ ಸರಡಗಿ, ಸುಧಾ, ಬೆಂಗಳೂರು ಸಮಿತಿಯ ಮಂಜುಬಾಯಿ, ಹಣಮಂತ, ಶಿವಕುಮಾರ್, ರಾಘವೇಂದ್ರ ಉಪಸ್ಥಿತರಿದ್ದರು.

2023ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಸ್ಲಂ ನಿವಾಸಿಗಳಿಗೆ ಘೋಷಿಸಿರುವ ಭರವಸೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ಸಮಾವೇಶವನ್ನು ಹುಬ್ಬಳ್ಳಿ ಅಥವಾ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುವುದು. ಕೇಂದ್ರದ ನಗರಾಭಿವೃದ್ಧಿ ಮತ್ತು ನಗರ ಬಡತನ ಹಾಗೂ ವಸತಿ ಯೋಜನೆಗಳು ಕಾರ್ಪೋರೇಟ್ ಆಧಾರಿತ ದೃಷ್ಟಿಕೋನವನ್ನು ಹೊಂದಿದ್ದು ಸ್ಲಂ ಜನರು ನಗರಗಳ ಮೇಲೆ ಹಕ್ಕುಸ್ಥಾಪಿಸಲು ಆಂದೋಲನವನ್ನು ಕೈಗೊಳ್ಳಲಾಗುವುದೆಂದು ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಹೇಳಿದರು.

 


Spread the love

LEAVE A REPLY

Please enter your comment!
Please enter your name here