ವಿಜಯಸಾಕ್ಷಿ ಸುದ್ದಿ, ಗದಗ: ಭಾರತದ 18ನೇ ಮಹಾಶಕ್ತಿ ಪೀಠ ಕೊಲ್ಹಾಪೂರದ ಶ್ರೀ ಮಹಾಲಕ್ಷ್ಮೀ ದೇವಿಯ ಭಕ್ತರನ್ನು ಆಶೀರ್ವದಿಸುವ ಸನ್ನಿವೇಶವುಳ್ಳ ದೃಶ್ಯಾವಳಿಯನ್ನು ಸಾರ್ವಜನಿಕ ಗಣೇಶೋತ್ಸವದಲ್ಲಿ ಪ್ರದರ್ಶಿಸಲು ಗದುಗಿನ ನಾಲ್ವಾಡದವರ ಓಣಿಯ ಶ್ರೀ ಗಜಾನನೋತ್ಸವ ಸಮಿತಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಪ್ರತಿ ವರ್ಷ ವಿಶೇಷತೆಗಳನ್ನು ಮಾಡುತ್ತ ವೈಶಿಷ್ಠ್ಯಮಯ ಆಚರಣೆಗೆ ತನ್ನದೇ ಆದ ಹಿರಿಮೆಯನ್ನು ಪಡೆದಿರುವ ನಾಲ್ವಾಡದವರ ಓಣಿಯ ಶ್ರೀ ಗಜಾನನೋತ್ಸವ ಸಮಿತಿ 49ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಮಂಟಪ ನಿರ್ಮಾಣದ ಮುಂಭಾಗದಲ್ಲಿ ಭಗವಾ ಧ್ವಜಾರೋಹಣ ನೆರವೇರಿಸುವ ಮೂಲಕ ಸಂಪ್ರದಾಯದಂತೆ ಮಂಟಪ ನಿರ್ಮಾಣ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಓಣಿಯ ಹಿರಿಯ ಸಮ್ಮುಖದಲ್ಲಿ ನಾಲ್ವಾಡದವರ ಓಣಿಯ ಶ್ರೀ ಗಜಾನನೋತ್ಸವ ಸಮಿತಿಯ ಪದಾಧಿಕಾರಿಗಳು, ಯುವಕರು ಈ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು. ಮುಂದಿನ ವರ್ಷ 50ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಲು ಸಮಿತಿಯು ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ.