ತೋಂಟದ ಶ್ರೀಗಳ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

0
Presentation of the National Award for Mr. Tonta
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬಸವಣ್ಣನ ಕರುಣೆ, ದಯೆ, ಕಾಯಕ-ದಾಸೋಹ, ಸಮಾನತೆ, ಅಲ್ಲಮಪ್ರಭುಗಳ ವೈರಾಗ್ಯ, ಬಸವಣ್ಣನವರ ಜ್ಞಾನ, ಅಕ್ಕಮಹಾದೇವಿಯ ಹಂಬಲ, ಅಸಂಖ್ಯ ಶರಣರ ತಾಯ್ತನ, ಕ್ರಿಯಾಶೀಲತೆ ಮುಂತಾದ ಪುಣ್ಯವಿಶೇಷಗಳಿಂದ ಜೀವಂತ ರೂಪವಾಗಿ ಮೈದಾಳಿದವರು ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರು. ಯಾವುದೇ ಒಂದು ಕಪ್ಪುಚುಕ್ಕೆ ಇಲ್ಲದೆ ಪರಿಶುದ್ಧವಾದ ತಮ್ಮ ಜೀವನವನ್ನು ಈ ನಾಡು-ನುಡಿ, ಗಡಿ-ನಿಸರ್ಗ, ಕಲೆ, ಸಾಹಿತ್ಯ, ಬಸವತತ್ವ ಪ್ರಸಾರ, ದೀನದಲಿತರ ಉನ್ನತಿಗಾಗಿ ಮೀಸಲಿಟ್ಟರು. ಅವರ ಭಾವೈಕ್ಯತೆಗಾಗಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಹಾಗೂ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕೇಂದ್ರ ಸರ್ಕಾರ ಕೋಮುಸೌಹಾರ್ದತಾ ಹಾಗೂ ದೇಶದ ಏಕತಾ ಪ್ರಶಸ್ತಿ, ಕಲಬುರ್ಗಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಪ್ರಶಸ್ತಿಗಳ ಗೌರವವನ್ನು ಹೆಚ್ಚಿಸಲಾಗಿದೆ.

Advertisement

ಪೂಜ್ಯರ ನುಡಿ ಸಿಂಹವಾಣಿಯಾಗಿತ್ತು. ತಮ್ಮ ವೀರ-ಧೀರ ನಡೆ-ನುಡಿಗಳಿಂದ ಮಹಾಶರಣರಂತೆ ಬದುಕಿ ನಾಳೆ ಬಪ್ಪುದು ನಮಗೀಗಲೇ ಬರಲಿ, ಮರಣವೇ ಮಹಾನವಮಿ ಎಂಬ ಶರಣವಾಣಿಗೆ ನಿದರ್ಶನವಲ್ಲ, ಸ್ವತಃ ದರ್ಶನವೇ ತಾವಾಗಿ ವಿಜಯದಶಮಿ ದಿನ ಎಲ್ಲರಿಗೂ ಬನ್ನಿ ಎಂದು, ಬನ್ನಿ ಬಂಗಾರ ನೀಡಿ ಮರುದಿನದ ಬೆಳಗಿನಲ್ಲಿ ಬೆಳಗಾದ ಮಹಾತ್ಮರು ಅವರ ಸಾಧನೆಗಳನ್ನು ನೆನೆದು ಅವರ ಅಭಿಮಾನಿ-ಶಿಷ್ಯರು, ಅವರ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಆ ಪ್ರಶಸ್ತಿಯನ್ನು, ಅದರೊಂದಿಗೆ 5 ಲಕ್ಷ ರೂಪಾಯಿ ಮೊತ್ತವನ್ನು ಹಾಗೂ ಫಲಕದೊಂದಿಗೆ ಪ್ರತಿ ವರ್ಷ ಪ್ರದಾನ ಮಾಡಲಾಗುವುದು ಮತ್ತು ಮರೆಗುದ್ದಿಯ ಪೂಜ್ಯ ಡಾ.ನಿರುಪಾಧೀಶ್ವರ ಮಹಾಸ್ವಾಮಿಗಳ ಸಂಮಾನ ನಡೆಯುವುದು.

ಅದರಂತೆ 2024ನೇ ಸಾಲಿನ ಪ್ರಶಸ್ತಿಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಕರ್ನಾಟಕ ಜಾನಪದ ಆಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದ ಗೊ.ರು ಚೆನ್ನಬಸಪ್ಪ ಅವರಿಗೆ ಪೂಜ್ಯರ 6ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಅ.14ರಂದು ಬೆಳಿಗ್ಗೆ 11 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದ ಸಾನ್ನಿಧ್ಯವನ್ನು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸುವರು. ಮುಂಡರಗಿ-ಬೈಲೂರ, ಭೈರನಟ್ಟಿ, ಆಳಂದ, ಸಂಡೂರ, ಅರಸಿಕೇರಿ ಮಠದ ಮಹಾಸ್ವಾಮಿಗಳು ಸಮ್ಮುಖ ವಹಿಸುವರು.

ಪ್ರೊ.ಶಿವಾನಂದ ಪಟ್ಟಣಶೆಟ್ಟಿ ಅವರು ರಚಿಸಿದ `ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ದುಬೈ ಭೇಟಿಯ ನೆನಪುಗಳು’ ಹಾಗೂ ಡಾ. ಲಕ್ಷö್ಮಣ ಕೌಂಠೆ ರಚಿಸಿದ `ಶ್ರೀ ಚನ್ನಬಸವ ಸ್ವಾಮಿಗಳು’ ಗ್ರಂಥಗಳು ಲೋಕಾರ್ಪಣೆಗೊಳ್ಳುವವು. ಈ ಕಾರ್ಯಕ್ರಮಕ್ಕೆ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಎಲ್ಲ ಸದ್ಭಕ್ತರು, ಅಭಿಮಾನಿಗಳು ಪಾಲ್ಗೊಳ್ಳಲು ಪ್ರಶಸ್ತಿ ಸಮಿತಿ ಕಾರ್ಯದರ್ಶಿ ಪ್ರೊ.ಶಿವಾನಂದ ಪಟ್ಟಣಶೆಟ್ಟಿಯವರು ವಿನಂತಿಸಿದ್ದಾರೆ.

ಕಾರ್ಯಕ್ರಮದ ಅತಿಥಿಗಳಾಗಿ ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಸಿ.ಸಿ ಪಾಟೀಲ, ಜಿ.ಎಸ್ ಪಾಟೀಲ, ಡಾ. ಚಂದ್ರು ಲಮಾಣಿ, ವಿ.ಪ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ಮಾಜಿ ಸಂಸದರಾದ ಶಿವಕುಮಾರ ಉದಾಸಿ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಕಳಕಪ್ಪ ಬಂಡಿ, ಬಿ.ಆರ್. ಯಾವಗಲ್, ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ವಿಶೇಷ ಅತಿಥಿಗಳಾಗಿ ಡಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಬಿ.ಡಿ. ಕುಂಬಾರ ಅವರು ಭಾಗವಹಿಸುವರು.


Spread the love

LEAVE A REPLY

Please enter your comment!
Please enter your name here