ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕರ್ನಾಟಕ ಭವನದಲ್ಲಿ ಬೃಹತ್ ಮಟ್ಟದಲ್ಲಿ ಮುಸ್ಲಿಂ ಏಕತಾ ಕಾನ್ಫರೆನ್ಸ್ ನಡೆಯಿತು. ನಗರದಲ್ಲಿ ಅಂಜುಮನ್ ಚುನಾವಣೆಯಲ್ಲಿ ಸುಮಾರು 41 ಅಭ್ಯರ್ಥಿಗಳು ಕಣದಲ್ಲಿದ್ದು, ಪರಸ್ಪರ ಪ್ರೀತಿ-ವಿಶ್ವಾಸದಿಂದ ಚುನಾವಣೆ ನಡೆಸುವಂತೆ ಹಾಗೂ ಏಕತೆಯಿಂದ ಇರುವಂತೆ ಹಜರತ್ ಇರ್ತಿಗಾರ್ ಅಹಮದ ಕಾಶ್ಮೀರವರು ಅಭ್ಯರ್ಥಿಗಳಲ್ಲಿ ವಿನಂತಿಸಿದರು.
ಜಮೈತೆ ಉಲ್ಮಾ ಗದಗನ ಅಧ್ಯಕ್ಷ ಹಜರತ್ ಇನಾಯತುಲ್ಲಾ ಪೀರಜಾದೆ ಮಾತನಾಡಿ, ಅಂಜುಮನ್ ಚುನಾವಣೆ ಸ್ಪರ್ಧಿಸುವ ಯುವಕರು ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡಿ. ಶಿಕ್ಷಣ ಹಾಗೂ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು.
ಮೌಲಾನಾ ಪಲ್ಲಿದರವರು ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಪ್ರಾಮಾಣಿಕ ಸೇವೆ ಮಾಡಬೇಕು. ಚುನಾವಣೆಯು ಸೌಹಾರ್ದತೆಯಿಂದ ಸಾಗಲಿ. ಈ ದೇಶದ ಸೇವೆಯನ್ನು ಮಾಡಲು ದೇಶದ ಎಲ್ಲಾ ಮುಸಲ್ಮಾನರು ಸದಾಕಾಲ ಮೊದಲಿನ ಸಾಲಿನಲ್ಲಿ ನಿಲ್ಲುತ್ತಾರೆ ಎಂದರು.
ವೇದಿಕೆ ಮೇಲೆ ಮೌಲಾನಾ ಮುಫ್ತಿ ಜಾಕ್ರಿಯಾ, ಮೌಲಾನಾ ಅಬ್ದುಲ್ ರಹೀಂ ಚಂದುನವರ, ಮೌಲಾನಾ ಅಬ್ದುಲ್ ಶಂಶುದ್ದೀನ್, ಮೌಲಾನಾ ರಿಯಾಜ್ ಬ್ಯಾಳಿರೊಟ್ಟಿ, ನ್ಯಾಯವಾದಿಗಳು ಎಸ್.ಕೆ. ನದಾಫ್, ಮುನ್ನ ಶೇಖ್, ಸೈಯದ್ ಖಾಲಿದ್ ಕೊಪ್ಪಳ, ಮುಫ್ತಿ ಸಮದ್ ಕಾಸ್ಮಿ, ಹಫೀಜ್ ಅನ್ವರ್ ಮುಧೋಳ್, ಹಫೀಜ್ ಸರ್ಫರಾಜ್ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.



