ಪತ್ರಕರ್ತರು ಡಿವಿಜಿಯವರನ್ನು ನೆನೆಯಬೇಕು : ದಢೇಸೂರಮಠ

0
Press Day Ceremony
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ನಾಡಿನ ಪತ್ರಕರ್ತರಿಗೊಂದು ಗುರುತಿಸುವಿಕೆಯನ್ನು ನೀಡಿ, ಅವರನ್ನು ಸಮಾಜ ಸೇವೆಗೆ ಸನ್ನದ್ಧಗೊಳಿಸಿದ ಡಿವಿಜಿಯವರನ್ನು ಪತ್ರಕರ್ತರು ನೆನೆಯಬೇಕು. ಅವರು ಆಗಿನ ಕಾಲದಲ್ಲಿ ಅನುಭವಿಸಿದ ಕಷ್ಟ ಕೋಟಲೆಗಳು ಈಗಿನ ಪತ್ರಕರ್ತರಿಗಿಲ್ಲವಾದರೂ, ಇರುವ ಪರಿಮಿತಿಗಳನ್ನು ಬಳಸಿಕೊಂಡು ಉತ್ತಮ ಪತ್ರಕರ್ತರಾಗುವತ್ತ ಚಿತ್ತ ಹರಿಸಬೇಕೆಂದು ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಹೇಳಿದರು.

Advertisement

ಪಟ್ಟಣದ ಶ್ರೀ ಹಿರೇಮಠದ ಸಭಾಭವನದಲ್ಲಿ ಬೀಚಿ ಬಳಗದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಡಿವಿಜಿ ಬದುಕು-ಬರಹ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಡಿವಿಜಿ ಅತ್ಯಂತ ಕಷ್ಟದಲ್ಲಿ ತಮ್ಮ ಜೀವನವನ್ನು ಕಳೆದರು. ತಮ್ಮ ವಿದ್ಯಾಭ್ಯಾಸಕ್ಕೆ, ಒಂದೊಪ್ಪತ್ತಿನ ಊಟಕ್ಕೂ ಪರಿದಾಡಿದ ಅವರು, ಎಂದಿಗೂ ತಮ್ಮ ಸ್ವಾಭಿಮಾನವನ್ನು ಬಿಟ್ಟುಕೊಟ್ಟವರಲ್ಲ. ಅಂತಹವರ ಬದುಕು ಎಲ್ಲರಿಗೂ ದಾರಿದೀಪವಾಗಬೇಕು. ಈಗಿನ ದಿನಗಳಲ್ಲಿ ಬರೆಯುವವರ ಸಂಖ್ಯೆಯೇನೋ ಹೆಚ್ಚಾಗಿದೆ. ಆದರೆ ಕಾಗುಣಿತದ ತಪ್ಪುಗಳು ಬಹಳಷ್ಟು ಕಂಡು ಬರುತ್ತಿವೆ. ಪತ್ರಕರ್ತರಾದವರು ತಮ್ಮ ಬರೆಹವನ್ನು ಸ್ಪಷ್ಟವಾಗಿ ಬರೆಯುವದನ್ನು ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಪತ್ರಕರ್ತರಾದ ಅರುಣ ಬಿ.ಕುಲಕರ್ಣಿ ಮಾತನಾಡಿದರು. ಪತ್ರಕರ್ತರಾದ ಅಧ್ಯಕ್ಷ ಆದರ್ಶ ಕುಲಕರ್ಣಿ, ಪ್ರಭುಸ್ವಾಮಿ ಅರಟವಗಿಮಠ, ಈಶ್ವರ ಬೆಟಗೇರಿ, ಸಂಗಮೇಶ ಮೆಣಸಿಗಿ, ಮಲ್ಲಯ್ಯ ಗುಂಡಗೋಪುರಮಠ, ಅರುಣ ಬಿ.ಕುಲಕರ್ಣಿ ಹಾಗೂ ಪತ್ರಿಕಾ ವಿತರಕರಾದ ರಾಜೇಂದ್ರ ಜಕ್ಕಲಿ, ರಾಜ್ಯ ಸರಕಾರಿ ನೌಕರರ ಸಂಘದಿಂದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಶಿಕ್ಷಕ ಸಿ.ಕೆ. ಕೇಸರಿಯವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ ಮಾತನಾಡಿ, ನರೇಗಲ್ಲ ಬೀಚಿ ಬಳಗದ ಬೆಳವಣಿಗೆಯಲ್ಲಿ ನರೇಗಲ್ಲ ಹೋಬಳಿ ಪತ್ರಕರ್ತರ ಪಾತ್ರ ದೊಡ್ಡದಿದೆ. ಅವರನ್ನು ನಾವು ಎಷ್ಟು ಅಭಿನಂದಿಸಿದರೂ ಕಡಿಮೆ. ಆದ್ದರಿಂದ ನಾವು ಈ ಸಾರೆ ಬೀಚಿ ಬಳಗದ ವತಿಯಿಂದ ಪತ್ರಿಕಾ ದಿನಾಚರಣೆಯನ್ನು ಆಚರಿಸಿ ಅವರನ್ನು ಅಭಿನಂದಿಸಿದ್ದೇವೆ ಎಂದರು.

ವೇದಿಕೆಯ ಮೇಲೆ ಸಂಘದ ಉಪಾಧ್ಯಕ್ಷ ಸಂಗಮೇಶ ಮೆಣಸಿಗಿ ಮತ್ತು ಮಲ್ಲಯ್ಯ ಗುಂಡಗೋಪುರಮಠ ಇದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ, ಭಾರತಿ ಶಿರ್ಸಿ, ಚಂದ್ರಾಮ ಗ್ರಾಮಪುರೋಹಿತ, ಡಾ. ಎಲ್.ಎಸ್. ಗೌರಿ, ಈಶ್ವರಪ್ಪ ಇಳಕಲ್ಲ, ಜಿ.ಎ. ಬೆಲ್ಲದ, ಸಂಗಯ್ಯ ಪ್ರಭುಸ್ವಾಮಿಮಠ, ಸಂಚಾಲಕ ಈಶ್ವರ ಬೆಟಗೇರಿ, ಎಸ್.ಸಿ. ಗುಳಗಣ್ಣವರ, ಡಾ. ಆರ್.ಕೆ. ಗಚ್ಚಿನಮಠ, ಮುಖ್ಯ ಶಿಕ್ಷಕ ಎಂ.ವಿ. ವೀರಾಪೂರ, ಬಸವರಾಜ ಕಲಾಲಬಂಡಿ, ಶಿಕ್ಷಕ ಎಂ.ಕೆ. ಬೇವಿನಕಟ್ಟಿ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು. ಮುತ್ತು ಹಡಪದ ನಿರೂಪಿಸಿದರು. ಶಿಕ್ಷಕ ಬಿ.ಟಿ. ತಾಳಿ ಪ್ರಾರ್ಥಿಸಿದರು. ಶಿವಯೋಗಿ ಜಕ್ಕಲಿ ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಡಿ.ಎ. ಅರವಟಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಜೆ.ಎ. ಪಾಟೀಲ ವಂದಿಸಿದರು.

ನರೇಗಲ್ಲ ಹೋಬಳಿ ಘಟಕದ ಪತ್ರಕರ್ತರ ಸಂಘದ ಅಧ್ಯಕ್ಷ ಆದರ್ಶ ಕುಲಕರ್ಣಿ ಮಾತನಾಡಿ, ಪಟ್ಟಣದಲ್ಲಿ ಅನೇಕ ಸಂಘಟನೆಗಳಿವೆ. ಆದರೆ ಅದರಲ್ಲಿ ಬೀಚಿ ಬಳಗದಿಂದ ಮಾತ್ರ ಪತ್ರಿಕಾ ದಿನಾಚರಣೆ ನಡೆಯುತ್ತಿರುವುದು ಶ್ಲಾಘನೀಯ. ಈ ಪರಂಪರೆ ಹೀಗೆಯೇ ಮುಂದುವರೆಯಲಿ. ತನ್ನ ವಿಧಾಯಕ ಕಾರ್ಯಕ್ರಮಗಳ ಮೂಲಕ ಪಟ್ಟಣದಲ್ಲಿ ಬೀಚಿ ಬಳಗ ಅನೇಕ ಮಹತ್ತರ ಕಾರ್ಯಕ್ರಮಗಳನ್ನು ಮಡುತ್ತಿರುವುದು ಸ್ತುತ್ಯಾರ್ಹ ಎಂದರು.


Spread the love

LEAVE A REPLY

Please enter your comment!
Please enter your name here