ಬೆಲೆ ಕುಸಿತ: ಫಸಲಿಗೆ ಬಂದ ಈರುಳ್ಳಿಯನ್ನು ಮಣ್ಣಲ್ಲಿ ಮುಚ್ಚಿದ ರೈತ

0
Spread the love

ಬಾಗಲಕೋಟೆ:– ಪಾಪ ಸಾಲಸೋಲ ಮಾಡಿ ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಿದ್ದರೆ ಅವನ ಪಾಡೇನು.. ಅವನ ಗೋಳು ಕೇಳುವವರು ಯಾರೂ?

Advertisement

ಅದರಂತೆ ಈರುಳ್ಳಿ ಬೆಲೆ ಕುಸಿತ ಹಿನ್ನೆಲೆ ಇಲ್ಲೋರ್ವ ರೈತ ಫಸಲಿಗೆ ಬಂದ ಈರುಳ್ಳಿ ಬೆಳೆಯನ್ನು ಮಣ್ಣಲ್ಲಿ ಮುಚ್ಚಿದ್ದಾರೆ. ಬೀಳಗಿ ತಾಲೂಕಿನ ಮನ್ನಿಕೇರಿ ಗ್ರಾಮದ ಗುರಲಿಂಗಪ್ಲ ಗಡ್ಡಿ ನಾಲ್ಕು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಈರುಳಿ ಉತ್ತಮ ಫಸಲು ಬಂದಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ ಎಂದು ಬೇಸರಗೊಂಡಿದ್ದರು.

ಸಾಲ ಮಾಡಿ ಈರುಳ್ಳಿ ಬೆಳೆದಿದ್ದೇನೆ. ಉತ್ತಮ ಫಸಲು ಬಂದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಒಂದು ಕ್ವಿಂಟಾಲ್ ಈರುಳ್ಳಿಗೆ 200 ರೂ. ಅಥವಾ 300 ರೂ. ಹೇಳುತ್ತಾರೆ. ಬೆಲೆ ಇಲ್ಲದ್ದಕ್ಕೆ ಈರುಳ್ಳಿಯನ್ನು ಮಣ್ಣಲ್ಲೇ ಮುಚ್ಚುತ್ತಿದ್ದೇನೆ ಎಂದು ಹೇಳಿದರು

ಮೊದಲೇ ಅತೀವೃಷ್ಟಿಯಿಂದ ಬೆಳೆ ಹಾಳಾಗಿತ್ತು. ಈಗ ಅಳಿದುಳಿದ ಫಸಲು ಬಂದಿದೆ. ಆದರೆ ಉತ್ತಮ ದರ ಸಿಗುತ್ತಿಲ್ಲ. ಹೀಗಾದರೆ ರೈತ ಹೇಗೆ ಬದುಕಬೇಕು? ಈರುಳ್ಳಿ ಬೆಳೆದ ರೈತರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.


Spread the love

LEAVE A REPLY

Please enter your comment!
Please enter your name here