ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಮಿಲಿಟರಿ ಚಟುವಟಿಕೆಯ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಭಾರತದ ಪಾಕ್ ವಿರುದ್ಧ ನಡೆಸಿದ ಸೇನಾ ಕಾರ್ಯಚರಣೆ ಬಗ್ಗೆ ಮಾತನಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇಂದು ಸಂಜೆ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ಜೊತೆ ಸಭೆ ನಡೆಯಲಿದೆ. ಕದನ ವಿರಾಮ ಘೋಷಣೆಯಾದ ನಂತರ ಎರಡು ದೇಶಗಳ ಡಿಜಿಎಂಒಗಳು ಇಂದು ಮೊದಲ ಬಾರಿಗೆ ಮಾತನಾಡಲಿದ್ದಾರೆ. ಪೂರ್ವ ನಿಗದಿ ಪ್ರಕಾರ ಇಂದು ಮಧ್ಯಾಹ್ನ ಡಿಜಿಎಂಒ ಸಭೆ ನಡೆಯಬೇಕಿತ್ತು. ಆದರೆ ಈ ಸಭೆ ಇಂದು ಸಂಜೆಗೆ ಮುಂದೂಡಿಕೆಯಾಗಿದೆ.
ಈ ಹಿಂದೆ ಬಿಹಾರದಲ್ಲಿ ಮಾತನಾಡಿದ್ದ ಮೋದಿ, ಪಹಲ್ಗಾಮ್‌ನಲ್ಲಿ ಮೃತಪಟ್ಟವರ ಬಲಿದಾನವನ್ನು ವ್ಯರ್ಥ ಮಾಡಲು ಬಿಡುವುದಿಲ್ಲ. ಉಗ್ರರು ಮತ್ತು ಉಗ್ರರಿಗೆ ನೆರವು ನೀಡುವವರ ಕಲ್ಪನೆ ಮಾಡದ ರೀತಿಯಾಗಿ ನಾವು ತಿರುಗೇಟು ನೀಡುತ್ತೇವೆ ಎಂದು ಗುಡುಗಿದ್ದರು.



