ವಿಜಯಸಾಕ್ಷಿ ಸುದ್ದಿ, ಮುಳಗುಂದ : ಶಿಕ್ಷಕರ ವೃತ್ತಿ ಎಲ್ಲಾ ವೃತ್ತಿಗಿಂತ ಅತ್ಯಂತ ಶ್ರೇಷ್ಠವಾದ ಹುದ್ದೆ ಎಂದು ಎಂಕೆಬಿಎಸ್ ಶಾಲೆಯ ಪ್ರಧಾನ ಗುರು ಪಿ.ಬಿ. ಕೆಂನಗೌಡರ ಹೇಳಿದರು.
ಅವರು ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ 1ರಲ್ಲಿ ಸರಕಾರಿ ಪ್ರೌಢಶಾಲೆಯ ಪ್ರಧಾನ ಗುರು ಆರ್.ಬಿ. ಡಂಬಳರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿ, ಆರ್.ಬಿ. ಡಂಬಳ 11 ವರ್ಷಗಳ ಕಾಲ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಹಗಲು ರಾತ್ರಿ ತಮ್ಮ ಸೇವೆಯನ್ನು ಅತ್ಯಂತ ನಿಷ್ಠೆ, ಶ್ರದ್ಧೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದು, ಅವರ ಸೇವೆ ನಮಗೆಲ್ಲರಿಗೂ ಮಾದರಿಯಾಗಿದೆ ಎಂದರು.
ಆರ್.ಬಿ. ಡಂಬಳ ಸನ್ಮಾನ ಸ್ವೀಕರಿಸಿ ಮಾತನಾಡಿ, ದೇಶವು ಅಭಿವೃದ್ಧಿ ಹೊಂದಲು ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕಾಯಕ ಮಾಡಿದಲ್ಲಿ ದೇಶವು ಶಿಕ್ಷಣವಂತ ದೇಶವಾಗಿ ಮುಂದುವರೆಯಲು ಸಹಕಾರಿಯಾಗುತ್ತದೆ. ಎಲ್ಲರೂ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದಾಗ, ಆ ಗುರುಗಳಿಗೆ ಗೌರವ ದೊರೆತಂತೆ ಆಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ವಿ.ಡಿ. ಸಿದ್ದನಗೌಡರ ವಹಿಸಿದ್ದರು. ಶರಣು ಪೂಜಾರ, ಎಲ್.ಬಿ. ರಾಠೋಡ, ಎಂ.ಎಂ. ಮೇಗಲಮನಿ, ಎಂ.ಎಂ. ಕೊಪ್ಪಳ, ಕೆ.ಎಂ. ಹೆರಕಲ್ಲ, ಎಚ್.ಆರ್. ಭಜೆಂತ್ರಿ, ಎಸ್.ಎಚ್. ಉಪ್ಪಾರ, ವಿ.ಎಂ. ಕಂಠಿ, ವಿ.ಎಸ್. ಹಿರೇಮಠ, ಎಸ್.ಡಿ. ಪಂಡಿತ, ಟಿ.ವೀಣಾ, ನಂದಾ ಮಟ್ಟಿ, ಜ್ಯೋತಿ ಜಾಧಾವ, ಪವಿತ್ರಾ ಮಟ್ಟಿ, ಶಭಾನಾ ಡಾಲಾಯತ ಇದ್ದರು.