ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗ್ರಾಮೀಣ ಭಾಗದ ರಸ್ತೆಗಳಿಗೆ ಸರಕಾರದಿಂದ ಹೆಚ್ಚಿನ ಅನುದಾನ ತಂದು ಆದ್ಯತೆಯ ಅನುಸಾರ ಕ್ಷೇತ್ರದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ತಾಲೂಕಿನ ಗೋವನಾಳ ಗ್ರಾಮದಲ್ಲಿ ಗ್ರಾಮೀಣ ಮತ್ತು ಪಂಚಾಯತ ರಾಜ್ ಇಲಾಖೆಯಡಿ ತಲಾ 50 ಲಕ್ಷ ರೂ ಮತ್ತು ಗುಲಗಂಜಿಕೊಪ್ಪದಲ್ಲಿ 50 ಲಕ್ಷ ರೂ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ನಾನು ಚುನಾವಣೆ ಪೂರ್ವದಲ್ಲಿ ಮಾತು ಕೊಟ್ಟಂತೆ ಈ ಭಾಗದ ಜನರ 2 ದಶಕಗಳ ಬೇಡಿಕೆಯ ಅನುಸಾರ ರಸ್ತೆಗೆ ಅನುದಾನ ತಂದಿದ್ದೇನೆ. ಮುಂಬರುವ ದಿನಗಳಲ್ಲಿ ಗ್ರಾಮದ ಎಸ್‌ಸಿ-ಎಸ್‌ಟಿ ಕಾಲೋನಿಗೂ ಅನುದಾನ ತಂದು ರಸ್ತೆ ಅಭಿವೃದ್ಧಿಪಡಿಸುತ್ತೇನೆ ಮತ್ತು ಗ್ರಾಮದ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಕಾರ್ಯ ಮಾಡುತ್ತೇನೆ ಎಂದರು.
ಈ ವೇಳೆ ಗ್ರಾ.ಪಂ ಅಧ್ಯಕ್ಷ ಕರಿಯಪ್ಪಗೌಡ ಹೊಸಗೌಡ್ರ, ಉಪಾಧ್ಯಕ್ಷೆ ನಿರ್ಮಲಾ ತಳವಾರ, ಪಿಡಿಓ ಜಗದೀಶ ಕುರುಬರ, ಗ್ರಾ.ಪಂ ಮಾಜಿ ಅಧ್ಯಕ್ಷ ಮಂಜನಗೌಡ ಕೆಂಚನಗೌಡ್ರ, ಅಣ್ಣಪ್ಪ ರಾಮಗೇರಿ, ಸುಶೀಲವ್ವ ಮರಿಲಿಂಗನಗೌಡ್ರ, ಬಸಪ್ಪ ಬಡಿಗೇರ, ಈಶ್ವರಪ್ಪ ಸೊರಟೂರ, ಈರನಗೌಡ ನಾಗನಗೌಡ್ರ, ಅಣ್ಣಯ್ಯ ಗಡ್ಡದೇವರಮಠ, ಚಂದ್ರು ತಳವಾರ, ಚಂದ್ರುಗೌಡ ಕರಿಗೌಡ್ರ, ವಸಂತಗೌಡ್ರ ಕರಿಗೌಡ್ರ, ದುಂಡಪ್ಪ ತೇಲಿ, ಯಲ್ಲಪ್ಪಗೌಡ ಭುವನಗೌಡ್ರ, ಪ್ರಕಾಶ ಅಂಗಡಿ, ಮಲ್ಲಯ್ಯ ಹಿರೇಮಠ, ಸೋಮನ ಗೌಡ ಕೊರಡೂರ, ಬಸವರಾಜ ಮಲ್ಲೂರ, ಗಂಗಾಧರ ಮೆಣಸಿನಕಾಯಿ, ಪರಸಪ್ಪ ಇಮ್ಮಡಿ, ಪ್ರವೀಣ ಬೋಮಲೆ, ವಿಶಾಲ ಬಟಗುರ್ಕಿ, ಗ್ರಾ.ಪಂ ಸದಸ್ಯರು, ಸಿಬ್ಬಂದಿಗಳು ಇದ್ದರು.



