HomeGadag Newsಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ

ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಗ್ರಾಮೀಣ ಪ್ರದೇಶಲ್ಲಿನ ನಮ್ಮ ಶಿಕ್ಷಣ ಸಂಸ್ಥೆಯ ಸಾಧನೆ ಹಾಗೂ ಗುಣಮಟ್ಟದ ಶಿಕ್ಷಣವನ್ನು ನೋಡಿ ನಗರ ಪ್ರದೇಶದ ಜನರು ಸಹ ನಮ್ಮ ಶಾಲೆಯಲ್ಲಿ ತಮ್ಮ ಮಕ್ಕಳ ಪ್ರವೇಶವನ್ನು ಪಡೆಯಬೇಕು. ಈ ಭಾಗದ ಮಕ್ಕಳಿಗೆ ನಮ್ಮ ಸಂಸ್ಥೆ ಸ್ಪೂರ್ತಿದಾಯಕವಾಗಲಿದೆ ಎಂದು ಆಡಳಿತ ಮಂಡಳಿಯ ಉಪಾಧ್ಯಕ್ಷ ವೀರನಗೌಡ ಈಶ್ವರಪ್ಪ ನಾಡಗೌಡ್ರ ಅಭಿಪ್ರಾಯಪಟ್ಟರು.

ಡಂಬಳ ಹೋಬಳಿ ಬರದೂರ ಗ್ರಾಮದ ಚಟ್ಟೇರ ವಿದ್ಯಾವರ್ಧಕ ಸಂಘ, ಬಿಳಗಿ ಶ್ರೀ ಈಶ್ವರಪ್ಪ ಎಂ.ನಾಡಗೌಡ್ರ ಮತ್ತು ಬಾಳಪ್ಪ ನಾಡಗೌಡ್ರ ಇವರ ಸ್ಮರಣಾರ್ಥವಾಗಿ ಜ್ಞಾನಸೂರ್ತಿ ಇಂಟರ್‌ನ್ಯಾಷನಲ್ ಶಾಲೆ, ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 1ರಿಂದ 5ನೇ ತರಗತಿ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದ ಕುರಿತು ಡಂಬಳದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಂಸ್ಥೆಯ ಕಾರ್ಯದರ್ಶಿ ಡಾ. ಮೋಹನ ಮಹಾಲಿಂಗಪ್ಪ ಚಟ್ಟೇರ ಮಾತನಾಡಿ, ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ತುಳಿತಕ್ಕೆ ಒಳಗಾದ ಹಾಗೂ ಶಿಕ್ಷಣದಿಂದ ವಂಚಿತವಾದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ನಮ್ಮ ಸಂಸ್ಥೆಯಲ್ಲಿ ನುರಿತ ಹಾಗೂ ಅನುಭವಿ ಶಿಕ್ಷಕರಿದ್ದು, ಉತ್ತಮ ಪರಿಸರ ಹಾಗೂ ಆಟದ ಮೈದಾನವಿದೆ. ನಮ್ಮ ಸಂಸ್ಥೆಯ ಬೆಳವಣೆಗೆಯಲ್ಲಿ ಈ ಭಾಗದ ಪಾಲಕರು ಹಾಗೂ ಮಕ್ಕಳ ಪ್ರೋತ್ಸಾಹ ಮತ್ತು ಸಹಕಾರ ಮಹತ್ವದ್ದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸದಸ್ಯ ಡಾ. ರಮೇಶ ದೇವರಡ್ಡಿ ರಾಮಣ್ಣವರ, ಮುದಕನಗೌಡ್ರ ಬಾಳಪ್ಪ ನಾಡಗೌಡ್ರ ಶಾಲೆಯ ಮುಖ್ಯೋಪಾಧ್ಯಾಯ ಸತ್ಯಪ್ಪ ಲಕ್ಷ್ಮಪ್ಪ ತಳವಾರ ಇದ್ದರು.

ಮಾರ್ಚ್ 13ರಂದು ಬರದೂರ ಗ್ರಾಮದಲ್ಲಿ ಸಾಯಂಕಾಲ 6 ಗಂಟೆಗೆ ಜ್ಞಾನಸೂರ್ತಿ ಇಂಟರ್‌ನ್ಯಾಷನಲ್ ಶಾಲೆ, ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 1ರಿಂದ 5ನೇ ತರಗತಿ ಶಾಲಾ ಕಟ್ಟಡ ಉದ್ಘಾಟನೆ ಸಮಾರಂಭದ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ರಸಮಂಜರಿ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಮಹನ್ಯ ಗುರು ಪಾಟೀಲ, ಬಿಗ್ ಬಾಸ್ ಹಾಗೂ ಸರಿಗಮಪ ಖ್ಯಾತಿಯ ಹನಮಂತ ಲಮಾಣಿ ಭಾಗವಹಿಸುವರು ಎಂದು ವೀರನಗೌಡ ಈಶ್ವರಪ್ಪ ನಾಡಗೌಡ್ರ ಮಾಹಿತಿ ನೀಡಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!