ಪರಿಸರ ಸ್ನೇಹಿ ಗಣಪನ ಪ್ರತಿಷ್ಠಾಪನೆಗೆ ಆದ್ಯತೆ

0
Priority is given to installation of eco-friendly Ganapan
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಪ್ರತಿ ವರ್ಷದಂತೆ ಈ ಬಾರಿಯೂ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿ ಅದ್ಧೂರಿ ಮತ್ತು ಅರ್ಥಪೂರ್ಣ ಗಜಾನನ ಉತ್ಸವ ಆಚರಣೆಗೆ ಬದ್ಧವಾಗಿದೆ. 9ನೇ ದಿನಕ್ಕೆ ವಿಸರ್ಜನೆ ಮಾಡುವ ನಿರ್ಧಾರಕ್ಕೆ ಬದ್ಧವಾಗಿದೆ. ಅಧಿಕಾರಿಗಳು, ಪೊಲೀಸರು ಸಹ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಗದಗ-ಬೆಟಗೇರಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಅಬ್ಬಿಗೇರಿ ಹೇಳಿದರು.

Advertisement

ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿ ಈ ಬಾರಿಯೂ ಪರಿಸರ ಸ್ನೇಹಿ ಗಣಪನ ಪ್ರತಿಷ್ಠಾಪನೆಗೆ ಪ್ರಾತಿನಿಧ್ಯ ನೀಡಿದೆ. ನಿಯಮ ಮೀರುವವರಿಗೆ ಮತ್ತೊಮ್ಮೆ ವಿನಂತಿಸಿಕೊಂಡು ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಲು ವಿನಂತಿಸಲಾಗಿದೆ ಎಂದರು.

ಸದ್ಯ ಅವಳಿ ನಗರದಲ್ಲಿ 180ಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿವೆ. ಆ ಎಲ್ಲ ಮಂಡಳಿಗಳು ಮಹಾಮಂಡಳಿ ಸದಸ್ಯತ್ವ ಪಡೆದುಕೊಂಡು ಮಹಾಮಂಡಳಿಗೆ ಬಲ ತುಂಬುವ ಜೊತೆಗೆ ಒಗ್ಗಟ್ಟಿನಿಂದ ಗಣೇಶೋತ್ಸವ ಆಚರಣೆಗೆ ಸಹಕಾರ ನೀಡಬೇಕು. ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವ ಮಂಡಳಿಗಳಿಗೆ ಪುರಸ್ಕಾರ ನೀಡಲಾಗುತ್ತದೆ ಎಂದು ತಿಳಿಸಿದರು.

ಮಹಾಮಂಡಳಿ ಅಧ್ಯಕ್ಷ ರಾಜಣ್ಣ ಮಲ್ಲಾಡದ ಅವರು ತರುಣ ವ್ಯಾಪಾರಸ್ಥರ ಸಂಘದ ನೆರವಿನಿಂದ 9ನೇ ದಿನ ನಡೆಯುವ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ. ಗಣೇಶ ವಿಸರ್ಜನೆ ಮೆರವಣಿಗೆ ವೀಕ್ಷಿಸಲು ಆಗಮಿಸುವ ಜನ ರಾತ್ರಿಯಿಡೀ ಕಾರ್ಯಕ್ರಮ ನೋಡಿ ಸಂಭ್ರಮಿಸಲಿ ಎನ್ನುವ ಕಾರಣಕ್ಕೆ ಊಟದ ವ್ಯವಸ್ಥೆ ಮಾಡಿದ್ದಾರೆ ಎಂದರು.

ಮಹಾಮಂಡಳಿ ಅಧ್ಯಕ್ಷ ರಾಜಣ್ಣ ಮಲ್ಲಾಡದ ಮಾತನಾಡಿ, ಶಾಲೆ-ಕಾಲೇಜುಗಳಲ್ಲಿಯೂ ಗಣೇಶೋತ್ಸವ ಆಚರಣೆ ಮಾಡಲು ಅನುಕೂಲ ಆಗುವಂತೆ ಈಗಾಗಲೇ ನೋಂದಣಿ ಮಾಡಿಕೊಂಡ 25 ಶಾಲೆ-ಕಾಲೇಜುಗಳುಗಳಿಗೆ ಉಚಿತವಾಗಿ ಗಣೇಶ ಮೂರ್ತಿಗಳನ್ನು ನೀಡಲಾಗುತ್ತಿದೆ. ಶನಿವಾರ ಬೆಳಿಗ್ಗೆ ಪಂಚಾಚಾರ್ಯ ಮಾಂಗಲ್ಯ ಮಂದಿರದಿಂದ ಗಣೇಶ ಮೂರ್ತಿಗಳನ್ನು ವಿತರಣೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕಿಶನ್ ಮೇರವಾಡೆ, ಪ್ರಕಾಶ ಅಂಗಡಿ, ರಾಜು ಮುಧೋಳ, ಅಜ್ಜಣ್ಣ ಮಲ್ಲಾಡದ, ಕಿರಣ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ರಾಜು ಖಾನಪ್ಪನವರ ಮಾತನಾಡಿ, ಹಿಂದೂ ಸಂಪ್ರದಾಯದಲ್ಲಿ ಮಣ್ಣು, ಕಲ್ಲು ಪೂಜಿಸಲಾಗುತ್ತದೆ. ಸಿಮೆಂಟ್‌ನಿಂದ ತಯಾರಿಸಿದ ಮೂರ್ತಿಗಳನ್ನು ಪೂಜಿಸುವುದು ನಮ್ಮ ಸಂಪ್ರದಾಯವಲ್ಲ. ಹೀಗಾಗಿ ಪ್ರತಿಯೊಬ್ಬರೂ ಮಣ್ಣಿನ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಪೂಜೆ ಮಾಡಬೇಕು. ಈ ಹಿಂದೆ ಬಾಲಗಂಗಾಧರ ತಿಲಕರು ಸ್ವಾತಂತ್ರ‍್ಯಕ್ಕಾಗಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ತಂದರು. ಈಗ ಧರ್ಮದ ಉಳಿವಿಗಾಗಿ ಹಬ್ಬವನ್ನು ಆಚರಣೆ ಮಾಡಬೇಕಾಗಿದೆ ಎಂದರು.

 


Spread the love

LEAVE A REPLY

Please enter your comment!
Please enter your name here