ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಸಿನಿಮಾಗಳಲ್ಲಿ ನಟಿಸದೇ ಹಲವು ವರ್ಷಗಳೇ ಕಳೆದಿದೆ. ಹಾಲಿವುಡ್ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿರುವ ನಟಿ ಈಗ ಮತ್ತೆ ಸೌತ್ ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ರಾಜಮೌಳಿ ನಿರ್ದೇಶನದಲ್ಲಿ ಮಹೇಶ್ ಬಾಬು ನಟನೆಯ ಸಿನಿಮಾದಲ್ಲಿ ದೇಸಿ ಗರ್ಲ್ ನಟಿಸುತ್ತಿದ್ದು ಈ ಸಿನಿಮಾದಲ್ಲಿ ನಟಿಸಲು ಪ್ರಿಯಾಂಕಾ ದುಬಾರಿ ಸಂಭಾವನೆಯನ್ನೇ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಪ್ರಿಯಾಂಕ 30 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ.
42 ವರ್ಷದ ಪ್ರಿಯಾಂಕಾ ಇಂದಿಗೂ ಚಿತ್ರರಂಗದಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ದಾರೆ. ಹಾಲಿವುಡ್‌ನಲ್ಲಿ ಆ್ಯಕ್ಷನ್ ಕ್ವೀನ್ ಆಗಿ ಮಿಂಚುತ್ತಿರುವ ಪಿಗ್ಗಿ ರಾಜಮೌಳಿ ಸಿನಿಮಾದ ಮೂಲಕ ಟಾಲಿವುಡ್ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡ್ತಿದ್ದು ಇದಕ್ಕಾಗಿ ಬರೋಬ್ಬರಿ 30 ಕೋಟಿ ರೂ. ಕೇಳಿದ್ದಾರಂತೆ. ಪ್ರಿಯಾಂಕಾಗೆ ಇರೋ ನೇಮೂ, ಫೇಮಿಗೆ ಚಿತ್ರತಂಡ 30 ಕೋಟಿ ನೀಡಲು ಮುಂದಾಗಿದೆಯಂತೆ.
ಇನ್ನೂ ಭಾರತದ ಯಾವುದೇ ನಟಿ ಇಷ್ಟು ಸಂಭಾವನೆ ಪಡೆದಿಲ್ಲ. ಹಾಗಾಗಿ ಪ್ರಿಯಾಂಕಾ ಭಾರತದ ಅತ್ಯಂತ ದುಬಾರಿ ನಟಿ ಎನಿಸಿಕೊಂಡಿದ್ದಾರೆ. ತಾತ್ಕಾಲಿಕವಾಗಿ ಈ ಚಿತ್ರವನ್ನು ‘ಎಸ್ಎಸ್ಎಂಬಿ 29’ ಎಂದು ಕರೆಯಲಾಗುತ್ತಿದೆ. ಮಹೇಶ್ ಬಾಬು ಅವರು ‘ಎಸ್ಎಸ್ಎಂಬಿ 29’ ಸಿನಿಮಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರ ಗೆಟಪ್ ಕೂಡ ಬದಲಾಗಲಿದೆ. ಈಗಾಗಲೇ ಈ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದ್ದು, ಆ ವಿಚಾರವನ್ನು ಗುಟ್ಟಾಗಿ ಇಡಲಾಗಿದೆ ಎಂದು ಕೂಡ ಹೇಳಲಾಗುತ್ತಿದೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರು ಈ ಸಿನಿಮಾಗೆ ಕಥೆ ಬರೆದಿದ್ದು, ಎಂಎಂ ಕೀರವಾಣಿ ಅವರು ಸಂಗೀತ ನೀಡುತ್ತಿದ್ದಾರೆ.