ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಣೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ರಾಯಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2024-25ನೇ ಸಾಲಿನಲ್ಲಿ ವಿವಿಧ ಸ್ಪರ್ಧೆ, ಆಟೋಟಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪಾರಿತೋಷಕ ವಿತರಣಾ ಸಮಾರಂಭ ನೆರವೇರಿತು.

Advertisement

ಸಮಾರಂಭದ ಮುಖ್ಯ ಅತಿಥಿಗಳಾಗಿ ಸಿ.ಆರ್.ಪಿ ಎಸ್.ಸಿ. ಹಿರೇಮಠ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧಿಕಾರಿಗಳಾದ ಎ.ಎಂ. ಢಾಲಾಯತ ವಹಿಸಿದ್ದರು.

ಸರ್ವರನ್ನೂ ಮುಖ್ಯೋಪಾಧ್ಯಾಯರಾದ ಎಸ್. ಎಸ್. ಕುಂಬಾರ ಸ್ವಾಗತಿಸಿದರು. ಮುಖ್ಯ ಅತಿಥಿಗಳನ್ನು ರವಿಚಂದ್ರನ್ ಪರಿಚಯಿಸಿದರು. ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಸಾನಿಯಾ ಮುಲ್ಲಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ವಿಭಾಗದ ಬಹುಮಾನ ವಿತರಣೆಯನ್ನು ಶಹನಾಜ ತಂಬ್ರಹಳ್ಳಿ ಮಾಡಿದರು. ಪೂರ್ವ ಪ್ರಾಥಮಿಕ ವಿಭಾಗದ ಬಹುಮಾನ ವಿತರಣೆಯನ್ನು ಲಕ್ಷ್ಮೀ ಕಲ್ಲೂರ್ ಮಾಡಿದರು. ಹೈಸ್ಕೂಲ್ ವಿಭಾಗದ ಬಹುಮಾನ ವಿತರಣೆಯನ್ನು ಅಂಜುಮ ಈಟಿ ಮಾಡಿದರು. ಕ್ರೀಡಾಕೂಟ ಭಾಗದ ಬಹುಮಾನ ವಿತರಣೆಯನ್ನು ಮೋಹನ್ ಬಳ್ಳಾರಿ ನೆರವೇರಿಸಿದರು.

ಈ ಸಂದರ್ಭದಲ್ಲಿ ದ್ರಾಕ್ಷಾಯಿಣಿ ಗುಡಿಗೇರಿ, ಆಫ್ರಿನ್ ತಹಸೀಲ್ದಾರ್, ಶಿಲ್ಪಾ ತಳಗೇರಿ, ಪುಷ್ಪಾ ಮೆಣಸಿಗಿ, ಯಾಸ್ಮಿನ್ ಬಳ್ಳಾರಿ, ಜಿನಥ್ ಮಾಲ್ದಾರ್, ಪರಝಾನಾ ಧಾರವಾಡ, ನಿಖತ್ತ ನರಗುಂದ, ಸೌಮ್ಯ ಸರ್ವಿ, ವೀಣಾ ಪಾ.ವಿ., ಸಿಬ್ಬಂದಿ ವರ್ಗದವರು ಹಾಗೂ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದು ಶಾಲಾ ಆಡಳಿತ ಅಧಿಕಾರಿ ಎ.ಎಂ. ಢಾಲಾಯತ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here