ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಜಿಲ್ಲಾಡಳಿತ ಭವನದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜನ್ಮದಿನಾಚರಣೆ ಅಂಗವಾಗಿ ಪ್ರೌಢಶಾಲೆ/ಪದವಿಪೂರ್ವ/ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗಗಳಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರಥಮ ಸ್ಥಾನಕ್ಕೆ 3 ಸಾವಿರ ರೂ, ದ್ವಿತೀಯ ಸ್ಥಾನಕ್ಕೆ 2 ಸಾವಿರ ರೂ ಹಾಗೂ ತೃತೀಯ ಸ್ಥಾನಕ್ಕೆ 1 ಸಾವಿರ ರೂ.ಗಳ ನಗದು ಬಹುಮಾನ ಹಾಗೂ ಪ್ರಮಾಣಪತ್ರವನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ವಿತರಿಸಿದರು. ಪ್ರೌಢ ಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಮಲ್ಲಿಕಾ ಅಂ.ತಿಪ್ಪಾರೆಡ್ಡಿ, ದ್ವಿತೀಯ ಸ್ಥಾನ ದಿವ್ಯಾ ಬ.ಲಕ್ಕುಂಡಿ, ತೃತೀಯ ಸ್ಥಾನ ಚಿನ್ನಾ ತಾ.ದೊಡ್ಡಮನಿ ಪಡೆದುಕೊಂಡರು.
ಪದವಿಪೂರ್ವ ವಿಭಾಗದಲ್ಲಿ ಪ್ರಥಮ ಸ್ಥಾನ ವಿಜಯಕುಮಾರ ದೊಡ್ಡಮನಿ, ದ್ವಿತೀಯ ಸ್ಥಾನ ಮೀನಾಜ್ ಡಾಲಾಯತ್, ತೃತಿಯ ಸ್ಥಾನ ನಾಗರಾಜ ಬೆನ್ನಳ್ಳಿ ಪಡೆದರು. ಪದವಿ ಮತ್ತು ಸ್ನಾತ್ತಕೋತ್ತರ ವಿಭಾಗದಲ್ಲಿ ಪ್ರಥಮ ಸ್ಥಾನ ಭಾಗ್ಯಶ್ರೀ ವಿ.ಸಿ, ದ್ವೀತಿಯ ಸ್ಥಾನ ರೋಶನಿ ತಳಕಲ್, ತೃತೀಯ ಸ್ಥಾನ ಈರಮ್ಮ ಕುಂದಗೋಳ ಪಡೆದರು.


