ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚಿಗೆ ಯು.ಎಸ್. ಆರ್ಟ್ ಗ್ಯಾಲರಿ ಅಸ್ಸಾಂ ವತಿಯಿಂದ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮೋತ್ಸವದ ಅಂಗವಾಗಿ ಜರುಗಿದ ಅಂತಾರಾಷ್ಟಿçÃಯ ಚಿಲ್ಡçನ್ ಆರ್ಟ್ ಸ್ಪರ್ಧೆಯಲ್ಲಿ ಸರ್ಕಾರಿ ಬಾಲಕರ ಬಾಲಮಂದಿರದ 10 ವಿದ್ಯಾರ್ಥಿಗಳು ಭಾಗವಹಿಸಿ, ಮೂವರು ವಿದ್ಯಾರ್ಥಿಗಳು ಟಾಪ್‌ಟೆನ್‌ನಲ್ಲಿ ಆಯ್ಕೆಯಾಗಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಪ್ರಾಥಮಿಕ ವಿಭಾಗದಲ್ಲಿ ಕಿರಣ್ ಚವಳಿಮಠ ಹಾಗೂ ಮಲ್ಲಿಕಾರ್ಜುನ್ ಹೂಗಾರ, ಪ್ರೌಢಶಾಲೆ ವಿಭಾಗದಲ್ಲಿ ಕಾರ್ತಿಕ ಬಂಡಾ ಭಾಗವಹಿಸಿ ಚಾರ್ಕೋಲ್ ಮಾಧ್ಯಮದಿಂದ ಪಂಡಿತ್. ಜವಾಹರಲಾಲ್ ನೆಹರು ಅವರ ಭಾವಚಿತ್ರದ ವಿಷಯ ಪೂರಕ ಚಿತ್ರವನ್ನು ರಚಿಸಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ಕಲಾವಿದ ಡಾ. ಜಾಕೀರಹುಸೇನ ಎಂ. ಕೊರ್ಲಹಳ್ಳಿ ಅವರಿಗೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳಾದ ರಫೀಕಾ ಹಳ್ಳೂರ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಜಯದೇವಿ ಎ.ಕವಲೂರ, ಸದಸ್ಯರಾದ ದೇವಪ್ಪ ಈರಗಾರ, ಸುಪರ್ಣ ಆರ್.ಬ್ಯಾಹಟ್ಟಿ, ಬಸವರಾಜ ಎನ್.ಸಂಶಿ, ಸರಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರಾದ ಗಿರಿಜಾ ದೊಡ್ಡಮನಿ, ವಿಜಯಲಕ್ಷ್ಮಿ ವಾಲಿ, ಗೋದಾವರಿ ಮುಳಗುಂದ, ಸಿಸ್ಟರ್ ಪ್ರೇಸಿಲ್ಲಾ (ಯು.ಎನ್.ಐ.ಸಿ.ಇ.ಎಫ್. ಸಪೋರ್ಟ್ ಪರ್ಸನ್) ಅನುಪಮಾ ಹಿರೇಗೌಡ್ರ, ಪ್ರಕಾಶ ಗಾಣಿಗೇರ, ಗೃಹಪಾಲಕರಾದ ಪ್ರವೀಣ್, ಮೈಲಾರಿ ನೀಲಗುಂದ, ಪ್ರಭಾವತಿ ಮತ್ತು ಸರ್ಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕರಾದ ಲಕ್ಷ್ಮೀ ಬಾಗೇವಾಡಿ, ಸಿಬ್ಬಂದಿ ವರ್ಗದವರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ವರ್ಗದವರು, ಸರ್ಕಾರಿ ಬಾಲಕರ ಬಾಲಮಂದಿರದ ಎಲ್ಲಾ ಸಿಬ್ಬಂದಿ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.