ತುಮಕೂರು: ಬಡವರ ಪರ ಕಾರ್ಯಕ್ರಮವನ್ನು ಪಕ್ಷ, ಜಾತಿ, ಧರ್ಮ ನೋಡಿ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ತುಮಕೂರಿನಲ್ಲಿ 9,000 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ಕೊಟ್ಟ ಬಳಿಕ ವೇದಿಕೆಯಲ್ಲಿ ಮಾತನಾಡಿದ ಅವರು,
ನಾವು ದಲಿತರು, ಬಡವರು ಎಲ್ಲಾ ವರ್ಗದ ಜನರಿಗೆ ಆರ್ಥಿಕ ಶಕ್ತಿ ತುಂಬಬೇಕು. ಅಂಬೇಡ್ಕರ್ ವಾದದಂತೆ ಎಲ್ಲರಿಗೂ ಸಾಮಾಜಿಕ ಆರ್ಥಿಕ ಸ್ವಾತಂತ್ರ‍್ಯ ಕೊಡಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ. ಹಾಗಾಗಿ ನಾವು ಬಡವರ ಪರ ಕಾರ್ಯಕ್ರಮ ಮಾಡುತ್ತೇವೆ.
ಈ ಕಾರ್ಯಕ್ರಮ ಜಾರಿ ಮಾಡುವಾಗ ಪಕ್ಷ, ಜಾತಿ, ಧರ್ಮ ನೋಡಿ ಮಾಡಿಲ್ಲ ಎಂದರು. ಇನ್ನೂ ಕೇಂದ್ರದಲ್ಲಿ 48 ಲಕ್ಷ ಕೋಟಿ ಬಜೆಟ್ ಗಾತ್ರವಿದೆ. ಅಲ್ಲಿ ಯಾಕೆ ಎಸ್ಸಿ-ಎಸ್ಟಿಗೆ ವಿಶೇಷ ಅನುದಾನ ಇಲ್ಲ. ನಾವು ಬಡವರ, ದಲಿತರ, ರೈತರ, ಮಹಿಳೆಯರ ಪರವಾಗಿ ಇದ್ದೇವೆ. ಒಟ್ಟಾರೆಯಾಗಿ ತುಮಕೂರು ಜಿಲ್ಲೆಯಲ್ಲಿ ಪರಮೇಶ್ವರ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.