ಸಮಾನತೆ ಮಂದಿರ ನಿರ್ಮಾಣದ ನಿಮಿತ್ತ ದಾರ್ಶನಿಕರ ಮೂರ್ತಿಗಳ ಮೆರವಣಿಗೆ: ರವಿಕಾಂತ ಅಂಗಡಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಅಂಬೇಡ್ಕರ್ ಜಯಂತ್ಯುತ್ಸವದ ಅಂಗವಾಗಿ ಕಳೆದ ವರ್ಷ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು. ಇದೇ ಶ್ರೇಣಿಯಲ್ಲಿ, ಸಮಾನತೆ ಮೌಲ್ಯಗಳನ್ನು ಪ್ರತಿಪಾದಿಸುವ `ಸಮಾನತೆ ಮಂದಿರ’ವನ್ನು ಕುರ್ತಕೋಟಿ ಗ್ರಾಮದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದನ್ನೊಳಗೊಂಡು ಎಪ್ರಿಲ್ 19ರ ಮಧ್ಯಾಹ್ನ 3 ಗಂಟೆಗೆ ಗದಗ ನಗರದ ಸ್ವಾಮಿ ವಿವೇಕಾನಂದ ಭವನದಲ್ಲಿ `ಬಸವ ಬುತ್ತಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಾನತೆ ಪ್ರತಿಷ್ಠಾನದ ಸದಸ್ಯ ರವಿಕಾಂತ ಅಂಗಡಿ ತಿಳಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮವು ‘ಸಮಾನತೆ ಯಾತ್ರೆ’ ನಿಮಿತ್ತ ನಡೆಯಲಿದೆ. ಹಿಂದೆ ಮಳೆಯ ಕಾರಣದಿಂದ ಮುನ್ಸಿಪಲ್ ಮೈದಾನದಲ್ಲಿ ನಿಗದಿಯಾಗಿದ್ದ ಸ್ಥಳ ಬದಲಾಗಿದ್ದು, ಕಾರ್ಯಕ್ರಮ ಇದೀಗ ಸ್ವಾಮಿ ವಿವೇಕಾನಂದ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಏಳು ದಾರ್ಶನಿಕರ ಮೂರ್ತಿಗಳ ಮೆರವಣಿಗೆ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಶಾಸಕ ಸಿ.ಸಿ. ಪಾಟೀಲ, ಮಾಜಿ ಸಚಿವ ಶ್ರೀರಾಮುಲು ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದೆ ಎಂದರು.

ಮೆರವಣಿಗೆಯು ಬಸವೇಶ್ವರ ಸರ್ಕಲ್–ಹುಯಿಲಗೋಳ ವೃತ್ತ–ಗಾಂಧಿ ವೃತ್ತ–ರೋಟರಿ ಸರ್ಕಲ್ –ಪಂಡಿತ ಪುಟ್ಟರಾಜ ಗವಾಯಿಗಳ ಸರ್ಕಲ್ ಮಾರ್ಗವಾಗಿ ವಿವೇಕಾನಂದ ಭವನದವರೆಗೆ ಸಾಗಲಿದೆ ಎಂದು ರವಿಕಾಂತ ಅಂಗಡಿ ತಿಳಿಸಿದರು.

ಈ ವೇಳೆ ಉಡಚಪ್ಪ ಹಳ್ಳಿಕೇರಿ, ಅಯ್ಯಪ್ಪ ಅಂಗಡಿ, ಶರಣು ಚಿಂಚಲಿ, ಪರಮೇಶ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.

ರಾಜಕೀಯೇತರ ಕಾರ್ಯಕ್ರಮ

ಡಾ. ಡಿ.ಆರ್. ಪಾಟೀಲ ಮತ್ತು ಅನಿಲ ಮೆಣಸಿನಕಾಯಿ ಭೇಟಿಯಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕೆಲವರು ಇದನ್ನು ರಾಜಕೀಯ ಅರ್ಥದಲ್ಲಿ ಬಿಂಬಿಸುತ್ತಿದ್ದಾರೆ. ಆದರೆ ಈ ಭೇಟಿಯು ಸಂಪೂರ್ಣ ಅಪರಿಚಿತ ಸನ್ನಿವೇಶದಲ್ಲಿ ನಡೆದಿದೆ. ಸಮಾನತೆ ಜಾತ್ರೆ ರಾಜಕೀಯೇತರ ಕಾರ್ಯಕ್ರಮವಾಗಿದ್ದು, ಯಾವುದೇ ಪಕ್ಷದ ಪ್ರಚಾರಕ್ಕೆ ಸಂಬAಧಿಸಿದAತೆ ಬಿಂಬಿಸಬಾರದು. ಸಂಘಟನೆ ಬೇರೆ, ಕಾರ್ಯಕ್ರಮ ಬೇರೆ. ಅನಿಲ ಮೆಣಸಿನಕಾಯಿ ಕೂಡಾ ಯಾವುದೇ ಚುನಾವಣಾ ರಾಜಕೀಯ ಮಾಡುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅವರು ಬಿಜೆಪಿಯಲ್ಲೇ ಇದ್ದು, ಪಕ್ಷದ ಕಾರ್ಯಕರ್ತರಿಗೆ ಮಾತ್ರ ಬೆಂಬಲ ನೀಡಲಿದ್ದಾರೆ.

– ರವಿಕಾಂತ ಅಂಗಡಿ.


Spread the love

LEAVE A REPLY

Please enter your comment!
Please enter your name here