ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಮಾಜ ಕಲ್ಯಾಣ ಇಲಾಖೆಯ ಎಸ್.ಸಿ./ಎಸ್.ಟಿ. ದೌರ್ಜನ್ಯ ಪ್ರತಿಬಂಧಕ ಕಾಯ್ದೆ 1989 ಗದಗ ಜಿಲ್ಲೆ ಜಾಗೃತಿ ಉಸ್ತುವಾರಿ ಸಮಿತಿ ನಾಮ ನಿರ್ದೇಶಿತ ಸದಸ್ಯರಾಗಿ ಸಾಮಾಜಿಕ ಕಾರ್ಯಕರ್ತ ಪ್ರೊ. ಸಂಗಮೇಶ ಹಾದಿಮನಿ ಆಯ್ಕೆಯಾಗಿದ್ದಾರೆ.
ಸಂವಿಧಾನ ಶಿಲ್ಪಿ ಡಾ ಬಿ. ಅರ್. ಅಂಬೇಡ್ಕರವರ ತತ್ವ-ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸಾಮಾಜಿಕ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಹಾದಿಮನಿಯವರನ್ನು ಆಯ್ಕೆ ಮಾಡಿರುವುದು ಅವರಿಗೆ ಸಂದ ಗೌರವ ಎಂದು ಗದಗ ಜಿಲ್ಲಾ ಅಂಬಿಗರ ಸಮಾಜದ ಜಿಲ್ಲಾಧ್ಯಕ್ಷ ರಾಮಣ್ಣ ಇರಕಲ್ಲ, ನಿಜ ಶರಣ ಅಂಬಿಗರ ಚೌಡಯ್ಯ ವಿವಿಧೋದ್ದೇಶಗಳ ಉಪಾಧ್ಯಕ್ಷ ಗುರಪ್ಪ ತಿರ್ಲಾಪೂರ, ರಾಷ್ಟ್ರೀಯ ಮೀನುಗಾರರ ತಾಲೂಕಾಧ್ಯಕ್ಷ ಹರೀಶ ಬಾರಕೇರ, ಮಂಜುನಾಥ ಗುಡಿಸಾಗರ, ರವಿಕುಮಾರ ಗುಡಿಸಾಗರ, ರಾಜು ಪೂಜಾರ, ಪ್ರವೀಣ ನೀಲಣ್ಣವರ, ಬಸವಪ್ರಭು ಹಾದಿಮನಿ, ಬಸವರಾಜ ಕ್ಯಾರಕೊಪ್ಪ ಹಾಗೂ ಗೆಳೆಯರ ಬಳಗದವರು ಅಭಿನಂದಿಸಿದ್ದಾರೆ.