ವಿಜಯಸಾಕ್ಷಿ ಸುದ್ದಿ, ಗದಗ: 35 ವರ್ಷಗಳಿಂದ ಅನುಪಮ ಶಿಕ್ಷಣವನ್ನು ನೀಡಿ ದೇಶ ಕಟ್ಟುವ ಶಿಷ್ಯರನ್ನು ನಿರ್ಮಿಸಿ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಲು ಶ್ರಮಿಸುವ ಮೂಲಕ ಸೇವಾ ನಿವೃತ್ತರಾಗುತ್ತಿರುವ ಪ್ರೊ. ಸತ್ತಾರ ಬಡೇಖಾನ ಅವರ ಕಾರ್ಯ ಪ್ರಶಂಸನೀಯ ಎಂದು ಪ್ರಾಚಾರ್ಯ ಎಮ್.ಯು. ಹಿರೇಮಠ ಹೇಳಿದರು.
ಇಲ್ಲಿನ ಪ್ರತಿಷ್ಠಿತ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಸೇವಾ ನಿವೃತ್ತಿ ಹೊಂದಿದ ಪ್ರೊ. ಸತ್ತಾರ ಬಡೇಖಾನರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಪ್ರಕಾಶ ದೇಶಪಾಂಡೆ, ಪ್ರೊ. ಪ್ರಕಾಶ ಕರಿಗಾರ ಮಾತನಾಡಿ, ಶಿಕ್ಷಣವೆಂದರೆ ಪಠ್ಯ ಕಲಿಕೆಯಲ್ಲ. ಜೀವನದ ಮೌಲ್ಯಗಳು, ಶಿಸ್ತು-ಸಂಸ್ಕಾರ ಕಲಿಸುವ ಕೆಲಸ ನಡೆದಾಗ ಮಾತ್ರ ಸಾಧ್ಯ. ತಮ್ಮ ವೃತ್ತಿ ಜೀವನಸುದ್ದಕ್ಕೂ ಜ್ಞಾನದಾಸೋಹ ಮಾಡಿರುವ ಪ್ರೊ. ಸತ್ತಾರ ಬಡೇಖಾನರ ಕಾರ್ಯ ಅವಿಸ್ಮರಣೀಯ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ. ಸತ್ತಾರ ಬಡೇಖಾನ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಉದ್ಯೋಗ ಹೊಂದಲು, ವಿದ್ಯಾರ್ಥಿ ಹಂತದಲ್ಲಿಯೇ ತಮ್ಮ ಗುರಿ ಸಾಧಿಸಲು ಪೂರ್ವ ಯೋಜಿತ ಯೋಜನೆಯನ್ನು ಹಾಕಿಕೊಂಡು ಅಧ್ಯಯನ ಮಾಡಿದರೆ ಉತ್ತಮ ಸಾಧನೆ ಮಾಡಬಹುದು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಗುರುವೃಂದ ಮಾರ್ಗದರ್ಶನ ನೀಡಲು ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊ. ಎಸ್.ಯು. ಸಜ್ಜನಶೆಟ್ಟರ, ಡಾ. ಎಸ್.ಕೆ. ಪೂಜಾರ, ಪ್ರೊ. ಮಹಾಲಕ್ಷ್ಮಿ ಹುಟಗಿ, ಪ್ರೊ. ರೂಪಾ ಶ್ರೀನಿವಾಸ, ಪ್ರೊ. ಮಹಬೂಬಆರೀಫ ಸದರಸೋಪವಾಲೆ, ಪ್ರೊ. ಸತೀಶ ಸರ್ವಿ, ಪ್ರೊ. ದ್ಯಾಮಣ್ಣ ಮನಿಕಟ್ಟಿ, ಪ್ರೊ. ರಿಯಾಜಅಹ್ಮದ ದೊಡ್ಡಮನಿ, ಪ್ರೊ. ಪ್ರತಿಭಾ ಚವ್ಹಾಣ, ಪ್ರೊ. ಸುಮಿತ್ರಾ ಮೇದಾರ, ಪ್ರೊ.ವಹಿದಾ ಕಿಲ್ಲೆದಾರ, ಲಕ್ಷ್ಮೀ ನಾಗರಾಳ, ಶ್ರೀದೇವಿ ಸೇರಿದಂತೆ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಇದ್ದರು.