ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಬಾಲ್ಕಿ ಚನ್ನಬಸವ ಆಶ್ರಮ ಪರಿಸರದಲ್ಲಿ ಅಮರಾವತಿ ಶಿವಯ್ಯ ಹಿರೇಮಠ ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷ ಕೊಡಮಾಡುವ `ಪೂಜ್ಯಶ್ರೀ ಡಾ. ಬಸವಲಿಂಗ ಪಟ್ಟದೇವರ ಸಾಹಿತ್ಯ ಪ್ರಶಸ್ತಿ-2025’ಕ್ಕೆ ಭಾಜನರಾದ ಗದುಗಿನ ವಚನ ಟಿ.ವಿ ವ್ಯವಸ್ಥಾಪಕ ನಿರ್ದೇಶಕ ಪ್ರೊ. ಸಿದ್ಧು ಯಾಪಲಪರವಿ ಇವರನ್ನು ಬಸವಳದ-ಬಸವಕೇಂದ್ರ-ಲಿAಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಜಾಗತಿಕ ಲಿಂಗಾಯತ ಮಹಾಸಭಾದ ಗದಗ ಜಿಲ್ಲಾ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
Advertisement
ಈ ಸಂದರ್ಭದಲ್ಲಿ ಶರಣರಾದ ಕೆ.ಎಸ್. ಚೆಟ್ಟಿ, ಎಸ್.ಎಂ. ಕವಳಿಕಾಯಿ, ಎಂ.ಬಿ. ಲಿಂಗಧಾಳ, ಎನ್.ಎಚ್. ಹಿರೇಸಕ್ಕರಗೌಡ್ರ, ಪ್ರಕಾಶ ಅಸುಂಡಿ, ಬಸವರಾಜ ಹಿರೇಹಡಗಲಿ, ಎಸ್.ಎ. ಮುಗದ, ಶಿವನಗೌಡ ಗೌಡರ, ಶರಣೆಯರಾದ ಡಾ. ಗಿರಿಜಾ ಹಸಬಿ, ಗೌರಕ್ಕ ಬಡಿಗಣ್ಣವರ, ಗಂಗಮ್ಮ ಹೂಗಾರ, ಪದ್ಮಾವತಿ ಹಂಜಗಿ ಮುಂತಾದವರು ಇದ್ದರು.