ವಿಜಯಸಾಕ್ಷಿ ಸುದ್ದಿ, ಗದಗ: ಬಸವಾದಿ ಶರಣರ ಮೌಲ್ಯಗಳ ಮತ್ತು ವಚನಗಳ ನಿಜಾಚರಣೆಯ ಪ್ರಚಾರದ ಉದ್ದೇಶ ಇಟ್ಟುಕೊಂಡು ಆರಂಭವಾದ ಸಂಸ್ಥೆ ರಾಷ್ಟ್ರೀಯ ಬಸವ ಪ್ರತಿಷ್ಠಾನ. ಸಾಣೆಹಳ್ಳಿಯ ಪರಮಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿ, ಎಸ್.ಎಂ. ಸುರೇಶ ಅವರ ಅಧ್ಯಕ್ಷತೆಯಲ್ಲಿ ಸಂಸ್ಥೆಯು ರಾಷ್ಟ್ರೀಯ , ಅಂತಾರಾಷ್ಟ್ರೀಯ ಸಮಾವೇಶಗಳನ್ನು ಆಯೋಜನೆ ಮಾಡುತ್ತ ಜಾಗತಿಕ ಪರ್ಯಟನೆಯಲ್ಲಿ ತೊಡಗಿದೆ.ಈ ವರ್ಷ ಬಾಲಿ, ಮಲೇಷಿಯಾ ಹಾಗೂ ಥೈಲ್ಯಾಂಡ್ ರಾಷ್ಟçಗಳಲ್ಲಿ ಹನ್ನೊಂದು ದಿನಗಳ ಕಾಲ ‘ಭಾರತ ವಚನ ಸಂಸ್ಕೃತಿ ಯಾತ್ರೆ’ಯನ್ನು ಆಯೋಜಿಸಿದೆ. ನ.೨೧ರಂದು ಇಂಡೋನೇಷ್ಯಾದ ಬಾಲಿಯಲ್ಲಿ ‘ಇಂಡಿಯಾ-ಬಾಲಿ ಸಾಂಸ್ಕೃತಿಕ ಸಮಾವೇಶ’ ಸಾಯಂಕಾಲ 7 ಗಂಟೆಗೆ ಜರುಗಲಿದೆ.ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು, ಬೆಟ್ಟಳ್ಳಿ ಮಠದ ಪರಮಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸುವರು.ಮಾಜಿ ಮುಖ್ಯಮಂತ್ರಿ ಡಾ.ಡಿ.ವಿ.ಸದಾನಂದಗೌಡರು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ.ವಿ.ಗೋಪಾಲಗೌಡರು ಹಾಗೂ ಇಸ್ರೋದ ಮಾಜಿ ಚೇರಮನ್ ಡಾ. ಎ.ಎಸ್. ಕಿರಣಕುಮಾರ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಈ ಯಾತ್ರೆಯಲ್ಲಿ ಗದಗ ಜಿಲ್ಲೆಯ ಕದಳಿ ವೇದಿಕೆ ಅಧ್ಯಕ್ಷರು, ಸಾಹಿತಿಗಳಾದ ಪ್ರೊ. ಸುಧಾ ಹುಚ್ಚಣ್ಣವರ, ಗದುಗಿನ ರೇಖಾ ಯಾಪಲಪರವಿ, ಲಕ್ಷ್ಮೇಶ್ವರ ಮೂಲದ ಪ್ರೊ.ಸಂಪದಾ ಕೆರಿಮನಿ ಪಾಲ್ಗೊಳ್ಳಲಿದ್ದಾರೆ.ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಡಾ. ಬಿ.ಎಫ್. ದಂಡಿನ, ರವಿ ದಂಡಿನ, ಡಾ. ಪುನೀತ್, ಶಿರಹಟ್ಟಿಯ ಡಬಾಲಿ ಶಿಕ್ಷಣ ಸಮಿತಿಯ ಚೇರಮನ್ ಡಿ.ಎನ್. ಡಬಾಲಿ, ಅನ್ನಪೂರ್ಣಮ್ಮ ತಾಯಿ ಡಬಾಲಿ, ಗಿರೀಶ್ ಎಂ.ಡಬಾಲಿ, ಸುರೇಶ್ ಎಂ.ಡಬಾಲಿ, ಕಾರ್ಯದರ್ಶಿ ಎನ್.ಆರ್. ಕುಲಕರ್ಣಿ, ಕರ್ನಾಟಕ ರಾಜ್ಯ ಪದವಿಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಸೋಮಣ್ಣವರ, ಸರ್ವ ಸದಸ್ಯರು, ಗದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಡಾ. ಜಿ.ಬಿ. ಪಾಟೀಲ, ಆರೋಗ್ಯ ಇಲಾಖೆಯ ಎನ್.ಟಿ. ಅಶ್ವಥ್ ರೆಡ್ಡಿ, ಶರಣ ಸಾಹಿತ್ಯ ಪರಿಷತ್ತಿನ ಚನ್ನಬಸಪ್ಪ ಕಂಠಿ, ಡಾ. ರಾಜಶೇಖರ ದಾನರಡ್ಡಿ, ಪ್ರಕಾಶ ಅಸುಂಡಿ, ಕೆ.ಎ. ಬಳಿಗೇರ, ಕದಳಿ ವೇದಿಕೆಯ ಪ್ರೇಮಾ ಗುಳಗೌಡರ, ಶಶಿಕಲಾ ಪಾಟೀಲ್, ಪ್ರೊ. ವೀಣಾ ತಿರ್ಲಾಪುರ್, ಪ್ರೇಮಾ ಮೇಟಿ, ಪುಷ್ಪಾ ಭಂಡಾರಿ, ನಾಗರತ್ನ ಪಾಟೀಲ, ಸುಲೋಚನ ಐಹೊಳೆ, ಹಾಗೂ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆಯ ಶರಣ ಚಿಂತಕರು ಅಭಿನಂದಿಸಿದ್ದಾರೆ.
ಇಂಡೋ-ಬಾಲಿ ವಚನ ಸಾಂಸ್ಕೃತಿಕ ಉತ್ಸವದಲ್ಲಿ ಪ್ರೊ.ಸಿದ್ದು ಯಾಪಲಪರವಿ ಉಪನ್ಯಾಸ
Advertisement