ಬೆಂಗಳೂರು: ನಮ್ಮಲ್ಲಿ ವಿಡಿಯೋ ರೆಕಾರ್ಡ್ ಆಗಿಲ್ಲ. ಅದೆಲ್ಲ ಫೇಕ್ ವಿಡಿಯೋ ಇರಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸಿ.ಟಿ ರವಿ ಅವಾಷ್ಯ ಶಬ್ದ ಹೇಳಿಕೆ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿರುವ ಕುರಿತು ಪ್ರತಿಕ್ರಿಯಿಸಿ ನಮ್ಮಲ್ಲಿ ವಿಡಿಯೋ ರೆಕಾರ್ಡ್ ಆಗಿಲ್ಲ. ಅದೆಲ್ಲ ಫೇಕ್ ವಿಡಿಯೋ ಇರಬೇಕು,
Advertisement
ಇದ್ದರೆ ದೂರು ಕೊಡಲಿ ಎಫ್‌ಎಸ್‌ಎಲ್‌ಗೆ ಕೊಡ್ತೀವಿ, ಆ ಬಳಿಕ ಏನ್ ಮಾಡಬೇಕು ತೀರ್ಮಾನ ಮಾಡ್ತೀನಿ ಎಂದಿದ್ದಾರೆ. ಇನ್ನೂ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪರಿಷತ್‌ನಲ್ಲಿ ನಿಂದನೆ ಆರೋಪ ಪ್ರಕರಣದಲ್ಲಿ ಮಹಿಳಾ ಆಯೋಗ ಎಂಟ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಹಿಳಾ ಆಯೋಗಕ್ಕೆ ಸಭಾಪತಿಗೆ ಕೇಳುವ ಅಧಿಕಾರ ಇಲ್ಲ, ಅವರು ಪತ್ರ ಬರೆಯಲಿ, ಆದ್ರೆ ಅದಕ್ಕೆ ನಾನು ಉತ್ತರ ಕೊಡಬೇಕಾಗಿಯೂ ಇಲ್ಲ. ಬೇಕಿದ್ರೆ, ಬೇರೆಯವರಿಗೆ ನೋಟೀಸ್ ಕೊಡಲಿ ಎಂದು ತಿಳಿಸಿದ್ದಾರೆ.