HomeGadag Newsಮಕ್ಕಳ ಹಕ್ಕುಗಳನ್ನು ಅರಿಯಿರಿ : ಮರಿಗೌಡ ಸುರಕೋಡ

ಮಕ್ಕಳ ಹಕ್ಕುಗಳನ್ನು ಅರಿಯಿರಿ : ಮರಿಗೌಡ ಸುರಕೋಡ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಮಕ್ಕಳು ತಮ್ಮ ಜೀವನದಲ್ಲಿ ಎದುರಿಸುತ್ತಿರುವ ಮೂಲ ಸಮಸ್ಯೆಗಳನ್ನು ಗೌಪ್ಯವಾಗಿಡದೇ ತಂದೆ-ತಾಯಿ ಹಾಗೂ ಸಂಬಂಧಿಸಿದವರ ಹತ್ತಿರ ಮುಕ್ತವಾಗಿ ಮಾತನಾಡಬೇಕು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಾಕಷ್ಟು ಶ್ರಮಿಸುತ್ತಿದೆ. ಪ್ರತಿಯೊಬ್ಬರೂ ಮಕ್ಕಳ ಹಕ್ಕುಗಳನ್ನು ಅರಿಯಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕಾ ವಿಸ್ತರಣಾಧಿಕಾರಿ ಮರಿಗೌಡ ಸುರಕೋಡ ಹೇಳಿದರು.

ಅವರು ಶಿರಹಟ್ಟಿ ಪಟ್ಟಣದ ಡಿ. ದೇವರಾಜು ಅರಸು ಭವನದಲ್ಲಿ ಯುನಿಸೆಫ್, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಬೆಂಗಳೂರು, ಚೈಲ್ಡ್ ರೈಟ್ಸ್ ಟ್ರಸ್ಟ್ ಹಾಗೂ ಆಸರೆ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ `ಮಕ್ಕಳ ಹಕ್ಕುಗಳ ಸಂಸತ್ತು-2024’ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಾಲ್ಯ ವಿವಾಹ, ಲಿಂಗ ತಾರತಮ್ಯ, ದುರುಪಯೋಗ, ಬಾಲಕಾರ್ಮಿಕತೆ, ಲೈಂಗಿಕ ಕಿರುಕುಳ ಹಾಗೂ ಮಕ್ಕಳ ಸಾಗಾಣಿಕೆ ಬಗ್ಗೆ ವಿಷಯಗಳನ್ನು ಮುಚ್ಚಿಡುವಂತಹ ಕಾರ್ಯ ಮಾಡದೇ ನಿರ್ಭೀತಿಯಿಂದ ನಿಮ್ಮ ಮಕ್ಕಳ ಹಕ್ಕುಗಳನ್ನು ಅರಿತು ನಿಮ್ಮ ಹಕ್ಕುಗಳನ್ನು ಚಲಾಯಿಸಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ.ಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಅಕ್ಬರ್ ಯಾದಗಿರಿ, ಪ್ರಕಾಶ ಮೇಟಿ, ಮಂಜುನಾಥ ಅರೆಪಲ್ಲಿ, ಪ್ರದೀಪ ಗೊಡಚಪ್ಪನವರ, ವೀರೇಶ ಉಮನಾಬಾದಿ, ಗೌರೀಶ ನಾಗಶೆಟ್ಟಿ, ಬಸವರಾಜ ನವಲಗುಂದ, ಜಿಲ್ಲೆಯ ಎಲ್ಲ ತಾಲೂಕುಗಳಿಂದ ಐವತ್ತಕ್ಕೂ ಹೆಚ್ಚು ಮಕ್ಕಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಜಿಲ್ಲಾ ಮಟ್ಟದ ಮಕ್ಕಳ ಹಕ್ಕುಗಳ ಸಮಾಲೋಚನಾ ಸಭೆಯಲ್ಲಿ ಆಸರೆ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಶಶಿಧರ ಶಿರಸಂಗಿ ಮಾತನಾಡಿ, ಇಂದಿನ ಮಕ್ಕಳ ಸಂಸತ್ತು ಚರ್ಚೆಯಲ್ಲಿ ನೀವೆಲ್ಲರೂ ಸಕ್ರಿಯವಾಗಿ ಭಾಗವಹಿಸಿ ನಿಮ್ಮ ಸಮಸ್ಯೆಗಳ ಪಟ್ಟಿ ತಯಾರಿಸಿ. ಇಲ್ಲಿಂದ ಆಯ್ಕೆಗೊಂಡ 2 ಮಕ್ಕಳು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಜರುಗುವ ಸಮಲೋಚನಾ ಸಭೆಯಲ್ಲಿ ನಮ್ಮ ಜಿಲ್ಲೆಯನ್ನು ಪ್ರತಿನಿಧಿಸಲು ತಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಉತ್ತಮ ಭಾಗವಹಿಸುವಿಕೆ ಮೂಲಕ ಯಶಸ್ಸು ಕಾಣಬೇಕಿದೆ. ಹೀಗಾಗಿ, ರಾಜ್ಯದಲ್ಲಿರುವ ಎಲ್ಲ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಚರ್ಚಿಸಿ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!