ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿ, ಹುಬ್ಬಳ್ಳಿಯಲ್ಲಿ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ ಅವರ ಅಧ್ಯಕ್ಷತೆಯಲ್ಲಿ ಎಲ್ಲ ವಿಭಾಗಗಳ ಪ್ರಗತಿ ಪರಿಶೀಲನಾ ಸಭೆ ಗುರುವಾರ ನಡೆಯಿತು.
ಚಾಲನಾ ಸಿಬ್ಬಂದಿಯ ಬಳಕೆ ಉತ್ತಮಗೊಳಿಸುವುದು, ಅಪಘಾತ ರಹಿತ ಕಾರ್ಯಾಚರಣೆಗೆ ಒತ್ತು ನೀಡುವುದು, ಕೆ.ಎಂ.ಪಿ.ಎಲ್ ಮತ್ತು ಇಪಿಕೆಎಂ ಸುಧಾರಿಸುವುದು ಇತ್ಯಾದಿ ವಿಷಯಗಳ ಕುರಿತು ಪ್ರಗತಿ ಪರಿಶೀಲಿಸಲಾಯಿತು. ಮುಂಬರುವ ದಿನಗಳಲ್ಲಿ ಜನದಟ್ಟಣೆಗೆ ಅನುಗುಣವಾಗಿ ಕಾರ್ಯಾಚರಣೆ ಮಾಡಲು, ಹಾಗೂ ವಾಣಿಜ್ಯ ಮಳಿಗೆಗಳ ಶುಲ್ಕವನ್ನು ಯು.ಪಿ.ಐ. ಮುಖಾಂತರ ಪಾವತಿಸಲು ಉತ್ತೇಜನೆ ನೀಡುವಂತೆ ನಿರ್ದೇಶನ ನೀಡಲಾಯಿತು.
ಈ ಸಂದರ್ಭದಲ್ಲಿ ಇಲಾಖಾ ಮುಖ್ಯಸ್ಥರಾದ ವಿವೇಕಾನಂದ ವಿಶ್ವಜ್ಞ, ಗಣೇಶ ರಾಠೋಡ, ಸಿದ್ದೇಶ್ವರ ಹೆಬ್ಬಾಳ, ಶ್ರೀನಿವಾಸಮೂರ್ತಿ ಸಿ., ಇಮಾಮ್ ಕಾಸಿಂ ಕಂದಗಲ್ಲ, ಬಿ. ಬೋರಯ್ಯಾ, ಸೋಮಣ್ಣ ಅಂಗಡಿ, ನಿತಿನ್ ಹೆಗಡೆ, ಶಶಿಧರ ಮರಿದೇವರಮಠ, ಅಧಿಕಾರಿಗಳಾದ ಸುನೀಲ್ ಎಮ್, ಹಾಗೂ ಎಲ್ಲಾ ವಿಭಾಗಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಸಂಚಾರ ಅಧಿಕಾರಿಗಳು, ತಾಂತ್ರಿಕ ಶಿಲ್ಪಿಗಳು, ಘಟಕ ವ್ಯವಸ್ಥಾಪಕರು ಉಪಸ್ಥಿತರಿದ್ದರು.