HomePolitics Newsಅರ್ಹರಿಗೆ ಯೋಜನೆಗಳು ತಲುಪುವಂತಾಗಲಿ : ಶಿವಮೂರ್ತಿ ಕೆ

ಅರ್ಹರಿಗೆ ಯೋಜನೆಗಳು ತಲುಪುವಂತಾಗಲಿ : ಶಿವಮೂರ್ತಿ ಕೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಅನ್ನಭಾಗ್ಯ ಯೋಜನೆಯು ಸರ್ಕಾರದ ಮಹತ್ವಪೂರ್ಣ ಯೋಜನೆಯಾಗಿದೆ ಎಂದು ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಶಿವಮೂರ್ತಿ ಕೆ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿಯ ರಾಜೀವ್ ಗಾಂಧಿ ಆವರಣದಲ್ಲಿ ಮಂಗಳವಾರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನ್ಯಾಯಬೆಲೆ ಅಂಗಡಿಯಲ್ಲಿ ಸಮಯ ಪಾಲನೆಯ ಫಲಕವನ್ನು ಕಡ್ಡಾಯವಾಗಿ ಹಾಕಿಸಿ, ಕೆಲ ಮಹಿಳೆಯರು ಕೂಲಿ ಕಾರ್ಮಿಕರು ಇರತ್ತಾರೆ. ಅವರಿಗೆ ಯಾವ ಸಮಯದಲ್ಲಿ ಬಂದರೂ ಅಕ್ಕಿಯನ್ನು ಒದಗಿಸುವ ವ್ಯವಸ್ಥೆ ಮಾಡಿ ಎಂದು ಸೂಚಿಸಿದರು.

ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿ ತಾಲೂಕಿನಲ್ಲಿ ದೋಷಪೂರಿತ ಬಿಲ್‌ಗಳ ಸಂಖ್ಯೆ ಶೂನ್ಯವಿದೆ.

ತಾಲೂಕಿನಲ್ಲಿ ಒಟ್ಟು ಒಟ್ಟು 265 ದೇವಸ್ಥಾನ, ಚರ್ಚ್, ಮಸೀದಿಗಳು ಇದ್ದು, 635 ಶಾಲಾ ಕಾಲೇಜುಗಳಿಗೆ ಹಾಗೂ 30 ಸರ್ಕಾರಿ ಕಚೇರಿಗಳಿಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ವಿವರಿಸಿದರು.

ತಾಲೂಕಿನಲ್ಲಿ ಒಟ್ಟು 75 ಸರ್ಕಾರಿ ಬಸ್ಸುಗಳಿದ್ದು, ಪ್ರತಿನಿತ್ಯ ಶೇ 39.20ರಷ್ಟು ಮಹಿಳೆಯರು ಉಚಿತ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಯುವನಿಧಿ ಯೋಜನೆಯಿಂದ ತಾಲೂಕಿನಲ್ಲಿ 2632 ಪದವಿ ವಿಧ್ಯಾರ್ಥಿಗಳು ಹಾಗೂ 80 ಡಿಪ್ಲೊಮಾ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಅರ್ಹ ಫಲಾನುಭವಿಗಳಿಗೆ ಈ ಎಲ್ಲಾ ಯೋಜನೆಗಳ ಸೌಲಭ್ಯ ಸಿಗುವಂತೆ ಅಧಿಕಾರಿಗಳು ಸಹಕರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹುಲಿಕಟ್ಟಿ ಚಂದ್ರಪ್ಪ, ತಹಸೀಲ್ದಾರ್ ಬಿಒವಿ ಗಿರೀಶ್ ಬಾಬು, ನರೇಗಾ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್, ದಾದಾಪೀರ್, ಪ್ರಭಾಕರ್, ಸಿಡಿಪಿಓ ಅಶೋಕ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!