ವಂದೇ ಭಾರತ್ ರೈಲು ನಿಲುಗಡೆಗೆ ಕ್ರಮ ವಹಿಸಿ:ಬಸವರಾಜ ಬೊಮ್ಮಾಯಿ

0
Progress review meeting of railway works under Haveri-Gadag districts
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರೈಲ್ವೆ ಕಾಮಗಾರಿಗಳ ನಿರ್ಮಾಣ ಹಾಗೂ ಪ್ರಗತಿ ಪರಿಶೀಲನಾ ಸಭೆಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿರವರು ನಡೆಸಿ ಹಾವೇರಿಯಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಶುಕ್ರವಾರ ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ರೈಲ್ ಸೌಧದಲ್ಲಿ ನಡೆದ ಸಭೆಯಲ್ಲಿ ಗದಗ-ಹಾವೇರಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ, ಚಾಲನೆಯಲ್ಲಿರುವ ರೈಲ್ವೆ ಯೋಜನೆಗಳ ಪ್ರಗತಿ ಹಾಗೂ ನೂತನ ರೈಲು ಮಾರ್ಗ ಆರಂಭಿಸಲು ತ್ವರಿತಗತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು. ಗದಗ ಜಿಲ್ಲಾ ವ್ಯಾಪ್ತಿಯ ಗದಗ-ಹೊಂಬಳ ರಸ್ತೆಯಲ್ಲಿರುವ ರೇಲ್ವೆ ಸೇತುವೆ, ಗದಗ–ಯಲವಿಗಿ ನೂತನ ರೇಲ್ವೆ ಮಾರ್ಗ, ಮುಂಡರಗಿ ತಾಲೂಕಿನ ಹಳ್ಳಿಕೇರಿ ಹತ್ತಿರ ಕೆಳ ಸೇತುವೆ ನಿರ್ಮಾಣ, ಗದಗ–ಗಜೇಂದ್ರಗಡ–ವಾಡಿ ಮಾರ್ಗ ಕಾಮಗಾರಿ, ಗದಗ-ಬೆಟಗೇರಿ ನಡುವೆ ಬಳ್ಳಾರಿ ಗೇಟ್ ಕೆಳಭಾಗದ ಸೇತುವೆ ದುರಸ್ತಿ, ಗದಗ-ನವಲಗುಂದ-ನರಗುಂದ ರೇಲ್ವೆ ಕಾಮಗಾರಿಗೆ ನಕ್ಷೆ ತಯಾರಿಸಿ ಅನುಮೋದಿಸುವುದು, ಕಣವಿ ಗ್ರಾಮದ ಹುಲಕೋಟಿ–ಯಲವಿಗಿ ಹೊಸ ರೈಲುಗಳ ಸರ್ವೇ ಮಾಡಲಾಗಿದೆ. ಈ ಸ್ಥಳ ಬದಲಾವಣೆ ಕುರಿತು ಸಾರ್ವಜನಿಕರಿಂದ ಮನವಿ ಬಂದಿದ್ದು, ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಗದಗ ಪಟ್ಟಣದ ಗಂಗಾಪುರ ಪೇಟೆಯ ಗೇಟ್ ನಂ.2ಎಗೆ ಮೇಲು ಸೇತುವೆ ಕಾಮಗಾರಿ ಪೂರ್ಣಗೊಳಿಸುವುದು, ಗದಗ-ಶಿರಹಟ್ಟಿ–ಯಲವಿಗಿ ರೇಲ್ವೆ ಮಾರ್ಗ ಕಾಮಗಾರಿ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸುವುದು, ಗದಗ-ಹರಪನಹಳ್ಳಿ ನೂತನ ರೈಲು ಮಾರ್ಗ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜನ ಶತಾಬ್ದಿ, ಕಿತ್ತೂರ ರಾಣಿ ಚನ್ನಮ್ಮ, ಯಶವಂತಪುರ-ವಾಸ್ಕೋ ಎಕ್ಸ್ಪ್ರೆಸ್, ಮಂಗಳೂರು– ವಿಜಯಪುರ ಎಕ್ಸ್ಪ್ರೆಸ್ ರೈಲನ್ನು ಯಲವಿಗಿ ಸ್ಟೇಷನ್‌ನಲ್ಲಿ ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದರು.

ಈ ಸಂಧರ್ಭದಲ್ಲಿ ನೈರುತ್ಯ ರೇಲ್ವೆ ಇಲಾಖೆಯ ಜನರಲ್ ಮ್ಯಾನೇಜರ್ ಅರವಿಂದ ಶ್ರೀ ವಾಸ್ತವ್ ಸೇರಿದಂತೆ ಇಲಾಖೆಯ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

ಹಾವೇರಿ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ರೈಲು ಮಾರ್ಗಗಳಲ್ಲಿ ಯಲವಿಗಿ-ಹಾವೇರಿ-ಬ್ಯಾಡಗಿ–ರಾಣೆಬೆನ್ನೂರ–ಚಳಗೇರಿ ರೇಲ್ವೆ ಸ್ಟೇಷನ್ ನವೀಕರಣ, ಲಕ್ಷ್ಮೇಶ್ವರ-ಸವಣೂರ ನಡುವೆ ಯಲವಿಗಿ ಹತ್ತಿರದ ರೇಲ್ವೆ ಸೇತುವೆ, ರಾಣೆಬೆನ್ನೂರ-ಶಿಕಾರಿಪುರ ನೂತನ ರೇಲ್ವೆ ಮಾರ್ಗ ಭೂ ಸ್ವಾಧೀನ ಮಾಡುವುದು, ರಾಣೆಬೆನ್ನೂರ ತಾಲೂಕಿನ ಕೋನಬೇವು-ಶಿಡಗನಾಳ ನಡುವೆ ರೇಲ್ವೆ ಸೇತುವೆ ನಿರ್ಮಾಣ, ಸವಣೂರ ತಾಲೂಕಿನ ಯಲವಿಗಿ ಗ್ರಾಮದ ಹತ್ತಿರ ಸಧ್ಯದ ಕೆಳ ಸೇತುವೆ ಬದಲಾಗಿ ಮೇಲ್ಸೇತುವೆ ನಿರ್ಮಾಣ ಮಾಡಲು ಸೂಚಿಸಿದರು.


Spread the love

LEAVE A REPLY

Please enter your comment!
Please enter your name here