ವಿಜಯಸಾಕ್ಷಿ ಸುದ್ದಿ, ಗದಗ : ಎಲ್ಲ ಕಾರ್ಮಿಕರು ಒಗ್ಗಟ್ಟಾಗಿ ಬಾಲಕಾರ್ಮಿಕರನ್ನು ಗುರುತಿಸಿ, ಕಾರ್ಮಿಕ ಪದ್ಧತಿ ನಿಷೇಧಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಶಿಕ್ಷಣವಂತರನ್ನಾಗಿ ಮಾಡಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಅಭಿಪ್ರಾಯಪಟ್ಟರು.
ನಗರದ ಕಾಟನ್ ಮಾರ್ಕೆಟ್ ರಸ್ತೆಯಲ್ಲಿರುವ ಹಂಜಿಗಿಯವರ ಕಾಂಪ್ಲೆಕ್ಸ್ನಲ್ಲಿ ಕಾರ್ಮಿಕ ಕಲ್ಯಾಣ ಸಂಸ್ಥೆ, ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟ, ಅಮರಶಿಲ್ಪಿ ಜಕಣಾಚಾರಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ, ಸೆಂಟರಿಂಗ್ ಮತ್ತು ಬಾರ್ ಬೆಂಡಿಂಗ್ ಮೇಸ್ತ್ರೀಗಳ ಸಂಘ ಹಾಗೂ ಜಿಲ್ಲೆಯ ಸಮಸ್ತ ಕಟ್ಟಡ ಕಾರ್ಮಿಕರು ಆಯೋಜಿಸಿದ್ದ ಬಾಲಕಾರ್ಮಿಕ, ಕಿಶೋರ ಕಾರ್ಮಿಕ ಪದ್ಧತಿ ನಿಷೇಧ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಗರಸಭಾ ಸದಸ್ಯ ಚಂದ್ರು ಪಿ.ಕರಿಸೋಮನಗೌಡರ ಮಾತನಾಡಿ, ಕಾರ್ಮಿಕರ ಯಾವುದೇ ಕಾರ್ಯಕ್ರಮದಲ್ಲಿ ನಾನು ನಿಮ್ಮೊಡನೆ ಇರುತ್ತೇನೆ ಎಂದು ಹೇಳಿದರು.
ಗದಗ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಮಾತನಾಡಿ, ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸಿಗುವ ಕಾರ್ಮಿಕರ ಎಲ್ಲ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಕಾರ್ಮಿಕರ ಮಕ್ಕಳು ಕೂಡಾ ಬಾಲಕಾರ್ಮಿಕ, ಕಿಶೋರ ಕಾರ್ಮಿಕರ ಪದ್ಧತಿ ನಿಷೇಧದ ಜನಜಾಗೃತಿಯನ್ನು ಮೂಡಿಸುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಮಿಕ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮಹಮ್ಮದ ಇರ್ಫಾನ ಡಂಬಳ ಮಾತನಾಡಿ, ಕಾರ್ಮಿಕ ಕಲ್ಯಾಣ ಸಂಸ್ಥೆಯಿಂದ ಶೈಕ್ಷಣಿಕ, ಧಾರ್ಮಿಕ, ಶಿಕ್ಷಣಕ್ಕೆ ಪೂರಕವಾಗಿ ಅವಶ್ಯವಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸಹಾಯಹಸ್ತ ನೀಡುವುದರ ಜೊತೆಗೆ ಕಾರ್ಮಿಕ ಕುಟುಂಬ ಭದ್ರತೆ ಯೋಜನೆಯನ್ನು ಎಲ್ಲ ವರ್ಗದ ಕಾರ್ಮಿಕರಿಗೂ ತಲುಪವ ಹಾಗೆ ಜಿಲ್ಲೆಯ ಸಮಸ್ತ ಕಟ್ಟಡ ಕಾರ್ಮಿಕರು ಹಾಗೂ ಎಲ್ಲ ಕಾರ್ಮಿಕ ಮುಖಂಡರೊಂದಿಗೆ ಯೋಜನೆಯನ್ನು ರೂಪಿಸಿ ಪ್ರತಿಯೊಬ್ಬ ಕಾರ್ಮಿಕರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಎಲ್ಲರೊಂದಿಗೆ ಈ ಕಾರ್ಯದಲ್ಲಿ ಶ್ರಮಿಸುತ್ತೇನೆ ಎಂದು ಹೇಳಿದರು.
ವೇದಿಕೆಯ ಮೇಲೆ ಕಾಂಗ್ರೆಸ್ ಮುಖಂಡರಾದ ಉಮರ ಫಾರೂಕ ಹುಬ್ಬಳ್ಳಿ, ಅಮರಶಿಲ್ಪಿ ಜಕಣಾಚಾರಿ ಸಂಘದ ಅಧ್ಯಕ್ಷ ಈಶಪ್ಪ ಬಳ್ಳಾರಿ, ಕಾರ್ಮಿಕ ಕಲ್ಯಾಣ ಸಂಸ್ಥೆಯ ಉಪಾಧ್ಯಕ್ಷ ಶಂಕರಗೌಡ ಭರಮಗೌಡ್ರ ಉಪಸ್ಥಿತರಿದ್ದರು.
ನಿಂಗಪ್ಪ ಕಟ್ಟಿಮನಿ ಸ್ವಾಗತಿಸಿದರು. ನಾಸೀರ ಚಿಕೇನಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ಮಹಮ್ಮದ ಯಸೂಫ ಬೇಪಾರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಭೀಮಪ್ಪ ಪೂಜಾರ, ಮಹಮ್ಮದ ಈಟಿ, ಎಸ್.ಪಿ. ಕರಿಸೋಮನಗೌಡರ, ಮಲ್ಲಪ್ಪ ಜೀವಣ್ಣವರ, ಕೆ.ಬಿ. ಕುಡಗುಂಟಿ, ಮಹಮ್ಮದ ಶಫೀ ಸಿದ್ಧಿ, ಆನಂದ ಮಾರನಬಸರಿ, ಜಾವೇದ ಹರ್ಲಾಪೂರ, ಮಂಜುನಾಥ ನಿರಂಜನ, ರಂಗನಗೌಡರ, ಮೆಹಬೂಬಅಲಿ ಮೊಮಿನ್, ಶೌಕತ ಯರಂಡಿವಾಲೆ, ಇಬ್ರಾಹಿಂ ಹಳ್ಳಿಕೇರಿ, ಸಂಗಮೇಶ ಕೂಡ್ಲಪ್ಪನವರ, ಚನ್ನವೀರಗೌಡ ಪಾಟೀಲ, ದುರಗಪ್ಪ ಗುಡಿಮನಿ, ನೂರಅಹ್ಮದ ಶಿರಹಟ್ಟಿ, ರಫೀಕ ಕರೇಕಾಯಿ, ಶೌಕತ ಧಾರವಾಡ, ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕರು, ಸಹಶಿಕ್ಷಕರು ಮುಂತಾದವರಿದ್ದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆಯಿಂದ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನವರೀನ ನದಾಫ್, ಜ್ಯೋತಿ ಕುರಟ್ಟಿ, ಪೂಜಾ ಹಾಲನವರ, ಚಿಂಚನಾ ಬೇಟಗೇರಿ, ಹೊನ್ನೆಪ್ಪ ಭಗವತಿ, ಯಲ್ಲಪ್ಪ ಕಿರೇಸೂರ, ತೇಜಸ್ವಿನಿ ಮೇಗಲಮನಿ, ಅನು ಮೇಗಲಮನಿ ಇವರಿಗೆ ಕ್ರೀಡಾ ಸಮವಸ್ತçವನ್ನು ವಿತರಿಸಲಾಯಿತು.
Advertisement