ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಗದಗ ನಗರದ ಪ್ರವಾಸಿ ಮಂದಿರದಲ್ಲಿ ಸಂಜು ವೆಡ್ಸ್ ಗೀತಾ-2ರ ಚಿತ್ರತಂಡ ಚಿತ್ರದ ಪ್ರಚಾರಕ್ಕಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡಿ, ಈ ಹಿಂದೆ ಬಂದ ಸಂಜುವೆಡ್ಸ್ ಗೀತಾ ಚಿತ್ರವನ್ನು ಕರ್ನಾಟಕದ ಜನತೆ ಮೆಚ್ಚಿಕೊಂಡಿದ್ದಾರೆ. ಕರ್ನಾಟಕದಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಂಡಿದ್ದು ಈಗ ಇತಿಹಾಸ. ಅಂತೆಯೇ ಭಾಗ-2ರ ಈ ಚಿತ್ರ ಅಷ್ಟೇ ಸೊಗಸಾಗಿ ಬಂದಿದೆ. ಚಿತ್ರದಲ್ಲಿರುವ ಎಲ್ಲಾ ಹಾಡುಗಳು ಚೆನ್ನಾಗಿ ಮೂಡಿಬಂದಿದೆ. ಕುಟುಂಬ ಸಮೇತರಾಗಿ ಕುಳಿತು ಯಾವುದೇ ಮುಜುಗುರವಿಲ್ಲದೇ ನೋಡುವ ಸಿನಿಮಾ ಇದಾಗಿದೆ ಎಂದು ತಿಳಿಸಿದರು.
ಸಂಜುವೆಡ್ಸ್ ಗೀತಾ ಭಾಗ-2ರ ಚಿತ್ರದ ನಾಯಕ ನಟ ನಗರ ಕಿಟ್ಟಿ ಮಾತನಾಡಿ, ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಾಯಕಿಯಾಗಿ ರಚಿತಾರಾಮ್, ಹಾಸ್ಯ ನಟರಾಗಿ ಸಾಧುಕೋಕಿಲ ನಟಿಸಿದ್ದಾರೆ. ಸಂಜುವೆಡ್ಸ್ ಗೀತಾ ಭಾಗ-2 ಇದೇ ದಿನಾಂಕ 10ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ನೋಡಿ ಹಾರೈಸಿ ಎಂದರು.
ಬಸವರಾಜ ಕಡೇಮನಿ ಮಾತನಾಡಿ, ಹಿಂದೆ ಚಲನಚಿತ್ರ ನಿರ್ಮಾಣ ಒಬ್ಬರ ಸ್ವತ್ತಾಗಿತ್ತು. ಈಗ ಅದು ಸಾಮಾನ್ಯರ ಕೈಗೆ ತಲುಪಿ ಒಳ್ಳೆಯ ಚಿತ್ರಗಳನ್ನು ಮಾಡಲು ಪ್ರೇರೇಪಿಸುತ್ತದೆಂದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಆನಂದ ಶಿಂಗಾಡಿ, ಹಿರಿಯರಾದ ಗುರುಬಸಪ್ಪ ಬಿಳೆಯಲಿ, ದೇವಪ್ಪ ಬಣಕಾರ, ಶಂಭು ಹುನಗುಂದ, ಪರಮೇಶ ಕಾಳಿ, ರಾಮು ಬಾಗಲಕೋಟೆ, ಶರೀಫ್ ಬಿಳೆಯಲಿ, ಅನಿಲ್ ಕಾಳೆ, ಪರಶು ಕಾಳೆ, ಶಿವಾನಂದ ತಮ್ಮಣ್ಣವರ, ಶಿವಾನಂದ ಕರಿಯಣ್ಣವರ, ಗೋಪಾಲ ಕಾಳೆ, ಅಕ್ಷಯ ಬಿಳೆಯಲಿ ಮಲ್ಲು ಬಾರಕೇರ ಮುಂತಾದವರು ಉಪಸ್ಥಿತರಿದ್ದರು.