ಕೊಪ್ಪಳ:- ಇಲ್ಲಿನ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಎರಡು ಕುಟುಂಬಗಳ ನಡುವಿನ ಆಸ್ತಿ ಕಲಹ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಜರುಗಿದೆ. 35 ವರ್ಷದ ಚೆನ್ನಪ್ಪ ನಾರಿನಾಳ ಕೊಲೆಯಾದ ದುರ್ದೈವಿ. ಶನಿವಾರ ಮಧ್ಯರಾತ್ರಿ ರವಿ ನಾರಿನಾಳ ಹಾಗೂ ಚೆನ್ನಪ್ಪ ನಾರಿನಾಳ ಕುಟುಂಬಗಳ ನಡುವೆ ಆಸ್ತಿ ವಿಚಾರವಾಗಿ ಜಗಳ ನಡೆದಿತ್ತು. ಈ ಜಗಳ ಅತಿರೇಕಕ್ಕೆ ತಿರುಗಿ ರವಿ ನಾರಿನಾಳ ಹಾಗೂ ಸಹಚರರು, ಚೆನ್ನಪ್ಪ ನಾರಿನಾಳರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ.
Advertisement
ಕೊಲೆ ಪ್ರಕರಣ ಸಂಬಂಧ 10 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಸದ್ಯ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇನ್ನುಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿದೆ.