ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಮಹಾನ್ ಮಾನವತಾವಾದಿಯಾಗಿದ್ದು, ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ್ದಾರೆ ಎಂದು ಪುರಸಭೆ ಸದಸ್ಯ ಶಿವರಾಜ್ ಘೋರ್ಪಡೆ ಹೇಳಿದರು.
ನಗರದ ಟೆಕ್ಕದ ದರ್ಗಾದಲ್ಲಿ ಈದ್ ಮಿಲಾದುನ್ನಬೀ ಪ್ರಯುಕ್ತ ಆಯೋಜಿಸಿದ್ದ ಮಕ್ಕಳ ಧಾರ್ಮಿಕ ನಾತ್ ಬಯಾನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಎಲ್ಲರನ್ನು ಸಮಾನವಾಗಿ ಕಾಣುವ ಮೂಲಕ ಸೌಹಾರ್ದತೆಯ ಸಂದೇಶ ನೀಡಿದವರು ಎಂದರು.
ಪ್ರಾಸ್ತಾವಿಕವಾಗಿ ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಮಾತನಾಡಿ, ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ನಡೆಸಿದ ವಿಶ್ವದ ಮಹಾನ್ ನಾಯಕರಾಗಿದ್ದು, ಅಸಮಾನತೆ, ಗುಲಾಮಗಿರಿ ವಿರುದ್ಧ ಸಮರ ಸಾರಿದ ಜಗತ್ತಿನ ಸರ್ವಶ್ರೇಷ್ಠ ಸಮಾಜ ಸುಧಾಕರು ಎಂದರು.
ಗಜೇಂದ್ರಗಡ ಪುರಸಭೆ ಸದಸ್ಯ ರಾಜು ಸಾಂಗ್ಲೀಕಾರ ಮಾತನಾಡಿ, 60ಕ್ಕೂ ಹೆಚ್ಚು ಮಕ್ಕಳಿಗೆ ಅರಬಿಕ್ ಮದರಸ ಹೇಳಿಕೊಡುತ್ತಿರುವ ಹಜರತ್ ನಿಜಾಮುದ್ದಿನಷಾ ಮಕಾನದಾರ ಹಾಗೂ ಟೆಕ್ಕದ ದರ್ಗಾದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
60ಕ್ಕೂ ಹೆಚ್ಚು ಮಕ್ಕಳು ನಾತ್ ಬಯಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದಿವ್ಯ ಸಾನ್ನಿಧ್ಯ ವಹಿಸಿದ ಟೆಕ್ಕದ ದರ್ಗಾದ ಹಜರತ್ ನಿಜಾಮುದ್ದಿನಷಾ ಅಶ್ರಫಿ ಮಕಾನದಾರ ಆಶೀರ್ವಚನ ನೀಡಿದರು. ಅಂಜುಮನ್ ಇಸ್ಲಾಂ ಕಮಿಟಿ ಚೇರಮನ್ ಹಸನಸಾಬ ತಟಗಾರ, ಎ.ಡಿ. ಕೋಲಕಾರ ಮಾತನಾಡಿದರು.
ಈ ವೇಳೆ ಮಾಜಿ ಪುರಸಭೆ ಸದಸ್ಯ ಮಾಸುಮಲಿ ಮಕಾನದಾರ, ಶ್ರೀಧರ ಬಿದರಳ್ಳಿ, ರಾಜು ಸಂಗ್ಲಿಕಾರ, ಮೈಬುಸಾಬ ಕೊಚಲಾಪೂರ, ದಾದೇಸಾಬ ಹಣಗಿ, ರಫೀ ಹವಾಲ್ದಾರ್, ಮಾಸುಮಲಿ ಮದಗಾರ, ಖ್ವಾಜಾ ಮಕಾನದಾರ, ನಿಶಾರಲಿ ಮಕಾನದಾರ ಮುಂತಾದವರು ಉಪಸ್ಥಿತರಿದ್ದರು.