ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿಯಲ್ಲಿ ಪ್ರವಾದಿ ಪೈಗಂಬರ ಜಯಂತಿ ಆಚರಿಸುವ ಕುರಿತು ಅವಳಿ ನಗರದ ಎಲ್ಲಾ ಯುವಕರು ಹಾಗೂ ಜಮಾತಿನ ಮುಖಂಡರು ಮತ್ತು ಮುಸ್ಲಿಂ ಸಮುದಾಯದ ಜನ ಪ್ರತಿನಿಧಿಗಳು ಗದಗ ನಗರದ ಹಳೆ ಬಸ್ನಿಲ್ದಾಣದ ಹತ್ತಿರವಿರುವ ಉರ್ದು ಸರ್ಕಾರಿ ಶಾಲೆಯ ನಂ. 2ರಲ್ಲಿ ಸಭೆ ಕರೆಯಲಾಗಿದೆ.
Advertisement
ಆಗಸ್ಟ್ 29ರ ಸಾಯಂಕಾಲ 5.30ಕ್ಕೆ ಉರ್ದು ಶಾಲೆ ಆವರಣದಲ್ಲಿ ಅವಳಿ ನಗರದ ಹಿರಿಯರ ಸಮುಖದಲ್ಲಿ ಪ್ರವಾದಿ ಪೈಗಂಬರ ಜಯಂತಿ ಆಚರಣೆ ನಿಮಿತ್ತ ಸಭೆ ಆಯೋಜಿಸಲಾಗಿದ್ದು, ಅವಳಿ ನಗರದ ಮುಸ್ಲಿಂ ಸಮಾಜದ ಸಮಾಜ ಬಾಂಧವರು ಸಭೆಗೆ ಆಗಮಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕೆಂದು ಈದ್ ಮಿಲಾದ ಕಮಿಟಿಯ ಮಾಜಿ ಅಧ್ಯಕ್ಷ ಅಬ್ದುಲ್ರೆಹಮಾನ ರಾಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.