ದುಶ್ಚಟಗಳಿಂದ ದೂರವಿದ್ದರೆ ಏಳಿಗೆ ಸಾಧ್ಯ: ಡಾ. ನಾಗರಾಜ್

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನೆಹರು ಯುವ ಕೇಂದ್ರ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಲಾಯನ್ಸ್ ಶಿಕ್ಷಣ ಸಂಸ್ಥೆ ಹಾಗೂ ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯ ಗದಗ ಇವರುಗಳ ಸಹಯೋಗದಲ್ಲಿ ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಯುವಕರಿಗಾಗಿ ವೃತ್ತಿ ಕೌಶಲ್ಯ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

Advertisement

ನಿಮ್ಹಾನ್ಸ್ ಕ್ಲಿನಿಕಲ್ ಸೈಕಾಲಜಿಸ್ಟ್ ಡಾ. ನಾಗರಾಜ್ ಮಾತನಾಡಿ, ಇಂದಿನ ಯುವಕರು ದುಶ್ಚಟಗಳಿಂದ ದೂರವಿದ್ದು, ಮೊಬೈಲನ್ನು ಸದ್ಬಳಕೆ ಮಾಡಿಕೊಂಡಲ್ಲಿ ಮಾತ್ರ ನಿಮ್ಮ ಏಳಿಗೆ ಸಾಧ್ಯ. ಯಾವುದೇ ಚಟುವಟಿಕೆಯನ್ನು ನೀವು ನಿರಂತರವಾಗಿ 21 ದಿನಗಳ ಕಾಲ ತಪ್ಪದೇ ಮಾಡಿದರೆ ಕೊನೆಗೆ ಅದುವೇ ಅಭ್ಯಾಸವಾಗುತ್ತದೆ. ಇದನ್ನೇ ನಾವು ಮನೋರೋಗ ಚಿಕಿತ್ಸಾ ವೈದ್ಯಕೀಯದಲ್ಲಿ ಹವ್ಯಾಸ ಅಥವಾ ಚಟ ಎನ್ನುತ್ತೇವೆ. ಕಾರಣ, ನಮ್ಮ ಯುವಕರು ಒಳ್ಳೆಯ ಹವ್ಯಾಸ-ಚಟಗಳನ್ನು ಮೇಳೈಸಿಕೊಂಡು, ಸಮಾಜಕ್ಕೂ, ನಿಮ್ಮ ಮನೆಗೂ ಪ್ರೀತಿ ಪಾತ್ರರಾಗಿರಿ ಎಂದು ಆಶಿಸಿದರು.

ಇನೋರ್ವ ಅತಿಥಿ ನಾಗರತ್ನ ಮಾತನಾಡುತ್ತಾ, ಇಂದಿನ ಯುವಕರು ಯುವಕರಂತೆ ಕಾಣದೇ ಇರುವುದಕ್ಕೆ ಅವರು ದಿನನಿತ್ಯ ಅನುಸರಿಸಿಕೊಂಡು ಬಂದ ನಡುವಳಿಕೆಗಳೇ ಕಾರಣ. ಆದ್ದರಿಂದ ಮೊದಲು ನೀವೆಲ್ಲರೂ ಒಳ್ಳೆಯ ನಡುವಳಿಕೆಗಳನ್ನು ನಿಮ್ಮಲ್ಲಿ ಅಳವಡಿಸಿಕೊಂಡರೆ, ಉತ್ತಮ ವ್ಯಕ್ತಿ ನೀವಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಅಭಿಪ್ರಾಯಪಟ್ಟರು.

ಕಾರ್ಯಾಗಾರದಲ್ಲಿ ಸ್ಟೂಡೆಂಟ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ರಾಜೇಶ ಕುಲಕರ್ಣಿ, ಆಡಳಿತಾಧಿಕಾರಿ ಎಮ್.ಸಿ. ಹಿರೇಮಠ, ಆಡಳಿತ ಮಂಡಳಿಯ ಸದಸ್ಯರಾದ ಸೈಯ್ಯದ ಮತೀನ್ ಮುಲ್ಲಾ, ರೋಹಿತ ಒಡೆಯರ್, ರಾಹುಲ್ ಒಡೆಯರ್, ಪುನೀತ ದೇಶಪಾಂಡೆ, ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಮುರಲೀಧರ ಸಂಕನೂರ ಸರ್ವರನ್ನೂ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರೆ, ಉಪನ್ಯಾಸಕಿ ಪ್ರೊ. ಹೀನಾಕೌಸರ ಮಾಳೆಕೊಪ್ಪ ವಂದಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ ಮಾತನಾಡುತ್ತಾ, ಪ್ರತಿ ವ್ಯಕ್ತಿಯ ಜೀವನಘಟ್ಟದಲ್ಲಿ ಯೌವ್ವನ ಎಂಬುದು ತುಂಬಾ ವಿರಳವಾದುದು. ಈ ಯೌವನದಲ್ಲಿ ಉತ್ತಮ ಚಟುವಟಿಕೆಗಳನ್ನು ಅನುದಿನವೂ ಅನುಸರಿಸಿದರೆ ಬಾಳು ಬಂಗಾರವೇ ಸರಿ ಎಂದರು.

 


Spread the love

LEAVE A REPLY

Please enter your comment!
Please enter your name here