ಗದಗ: ಅಪರೂಪದ ಕಾಡು ಬೆಕ್ಕಿನ ಮರಿಗಳ ರಕ್ಷಣೆ ಮಾಡಿರುವಂತಹ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಹಡಗಲಿ ಗ್ರಾಮದ ಜಮೀನಿನಲ್ಲಿ ನಡೆದಿದೆ. ರೈತ ಭೀಮಪ್ಪ ಕೆಂಚನಗೌಡ್ರ ಅವರ ಕಬ್ಬಿನ ಗದ್ದೆಯಲ್ಲಿ ಮರಿಗಳು ಪತ್ತೆಯಾಗಿವೆ.
Advertisement
ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಗದ್ದೆಯಲ್ಲಿ ಬೆಕ್ಕಿನ ಮರಿಗಳನ್ನು ನೋಡಿ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ನಾಯಿಗಳಿಂದ 20 ರಿಂದ 25 ದಿನಗಳ ಕಾಡು ಬೆಕ್ಕಿನ ಮರಿಗಳಿಂದ ರಕ್ಷಣೆ ಮಾಡಿದ್ದಾರೆ.
ನಂತರ ಸುರಕ್ಷಿತ ಜಾಗದಲ್ಲಿ ಇರಿಸಿ, ತಾಯಿ ಬೆಕ್ಕು ಬಂದು ಮರಿಗಳನ್ನು ತೆಗೆದುಕೊಂಡು ಹೋಗುವವರೆಗೆ ಕಾಯ್ದ ನಿಂತ ಸಿಬ್ಬಂದಿಗಳು ತಾಯಿ ಹಾಗೂ ಮರಿಗಳನ್ನು ಜೊತೆಗೆ ಇರೋದನ್ನು ಖಚಿತ ಪಡಿಸಿಕೊಂಡು ಹಿಂದುರಿಗಿದರು.