ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ: ಶಾಸಕ ಯತ್ನಾಳ ವಿರುದ್ಧ ಕ್ರಮಕ್ಕೆ ಆಗ್ರಹ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಅಹಲೆ ಸುನ್ನತ ವಲ್ ಜಮಾತ ಜಾಮಿಯಾ ಮಸ್ಜಿದ ಹಾಗೂ ಮುಸ್ಲಿಂ ಸಂಘಟನೆಗಳ ವತಿಯಿಂದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಸೋಮವಾರ ಶಿರಹಟ್ಟಿಯಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಮುಖಂಡರು, ಬಿಜೆಪಿ ಪಕ್ಷವು ವಕ್ಫ್-2024ರ ಪ್ರಸ್ತಾಪಿತ ವಿಧೇಯಕವು ಬಹುಸಂಖ್ಯಾತ ಪ್ರಚಾರದ ಅಡಿಯಲ್ಲಿ ವಕ್ಫ್ ದುರ್ಬಲಗೊಳಿಸುವ ಪ್ರಯತ್ನವಾಗಿದೆ. ಇದು ಸಾಮಾನ್ಯ ತತ್ವಗಳಿಗೆ ಮತ್ತು ಭಾರತದಲ್ಲಿ ನೆಲೆಗೊಂಡ ಕಾನೂನಿಗೆ ವಿರುದ್ಧವಾಗಿದೆ. ಬಿಜೆಪಿ ಪಕ್ಷವು ವಕ್ಫ್ಗಳ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದೆ. ಇದು ಬಿಜೆಪಿಯ ಕೆಟ್ಟ ಅಜೆಂಡಾವಾಗಿದೆ. ವಕ್ಫ್ ಕಾಯ್ದೆ ಜಾರಿಗೆ ನಾವು ಬಿಡುವದಿಲ್ಲ ಎಂದು ಕೇಂದ್ರ ಸರಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮೌಲಾನ ಮಜಹರಖಾನ ಪಠಾಣ, ಲತೀಫಶ್ಯಾ ಮಕಾನದಾರ, ಮಹ್ಮದಖುರೇಶಿ ಮನಿಯಾರ, ಅನ್ವರ ಬಾಗೇವಾಡಿ, ಹುಮಾಯೂನ್ ಮಾಗಡಿ, ಚಾಂದಸಾಬ ಮುಳಗುಂದ, ಅಶ್ರತಅಲಿ ಢಾಲಾಯತ, ಇಸಾಕ ಆದ್ರಳ್ಳಿ, ಅಬ್ದುಲಗನಿ ಕುಬಸದ, ಗೌಸುಸಾಬ ಕುಬಸದ, ರಫೀಕ ಆದ್ರಳ್ಳಿ, ಬಾಬುಸಾಬ ಮಾಚೇನಹಳ್ಳಿ, ಜಕಾವುಲ್ಲಾ ಮಾಗಡಿ, ಇಸ್ಮಾಯಿಲ್ ನದಾಫ್, ರಿಯಾಜ ತಹಸೀಲ್ದಾರ, ಅಲ್ಲಾಭಕ್ಷಿ ನಗಾರಿ, ದಸ್ತಗೀರ ಜಂಗ್ಲಿ, ಎ.ಎಂ. ಢಾಲಾಯತ, ಐ.ಜಿ. ಅತ್ತಾರ, ಎಸ್.ಎಂ. ಮನಿಯಾರ, ನೂರುಲ್ಲುಶಾ ಮಕಾನದಾರ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪ್ರವಾದಿ ಮಹಮ್ಮದ ಪೈಗಂಬರ ಅವರ ಕುರಿತು ಹುಬ್ಬಳ್ಳಿಯ ಸಮಾರಂಭವೊಂದರಲ್ಲಿ ಅವಹೇಳನಕಾರಿಯಾಗಿ ಮಾತುಗಳನ್ನಾಡಿದ್ದು, ಇದು ಮುಸ್ಲಿಂ ಸಮುದಾಯದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ಇಂತಹ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಭಾಷಣಕಾರರ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಶಿರಹಟ್ಟಿಯ ಅಹಲೆ ಸುನ್ನತ ವಲ್ ಜಮಾತ ಜಾಮಿಯಾ ಮಸ್ಜಿದ ವತಿಯಿಂದ ತಹಸೀಲ್ದಾರರ ಮೂಲಕ ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು.


Spread the love

LEAVE A REPLY

Please enter your comment!
Please enter your name here