ರಾಹುಲ್ ಗಾಂಧಿ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ದೇಶ ವಿರೋಧಿ ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಭಾರತ ದೇಶದ ವಿರುದ್ಧವೇ ಹೋರಾಟ ಮಾಡುವೆವು ಎಂಬ ದೇಶ ವಿರೋಧಿ ಹೇಳಿಕೆ ನೀಡಿದ್ದು ಹಾಗೂ ಭಾರತ ದೇಶದ ಸಂವಿಧಾನದ ಮೂಲಕ ರಚನೆಯಾದ ಎಲ್ಲಾ ಅಂಗಗಳನ್ನು ದೋಷಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಗದಗ ನಗರ ಮಂಡಲದ ವತಿಯಿಂದ ನಗರದ ಗಾಂಧಿ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆಯ ನೇತೃತ್ವವನ್ನು ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ನವೀನ್ ಕೋಟೆಕಲ್ ವಹಿಸಿಕೊಂಡಿದ್ದರು. ಪಕ್ಷದ ಹಿರಿಯರಾದ ಎಂ.ಎಸ್. ಕರಿಗೌಡ್ರ ಮಾತನಾಡಿ, ದೇಶದ ವಿರುದ್ಧ ಇಂತಹ ಹೇಳಿಕೆ ನೀಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಆರ್‌ಎಸ್‌ಎಸ್, ಬಿಜೆಪಿ ದೇಶದ ಪರವಾಗಿ ಕೆಲಸ ಮಾಡುತ್ತಿದೆ ಎಂದರು.

ನಗರ ಮಂಡಲ ಅಧ್ಯಕ್ಷರು ಮಾತನಾಡಿ, ದೇಶ ವಿರೋಧಿ ಮತ್ತು ಭಾರತ ದೇಶದ ಸಂವಿಧಾನದ ಮೂಲಕ ರಚನೆಯಾದ ಎಲ್ಲಾ ಅಂಗಗಳನ್ನು ದೋಷಿಸುತ್ತಿದ್ದು, ಈ ಮೂಲಕ ಭಾರತ ದೇಶದ ಪ್ರತಿಯೊಬ್ಬ ನಾಗರಿಕನನ್ನೂ ಅವಮಾನಿಸಿದಂತೆ ಎಂದರು.

ಈ ಸಂದರ್ಭದಲ್ಲಿ ಹಿರಿಯರಾದ ಎಂ.ಎಂ. ಹಿರೇಮಠ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಇರ್ಷಾದ ಮಾನ್ವಿ, ರಾಜ್ಯ ಹಿಂದುಳಿದ ವರ್ಗ ಮೋರ್ಚಾ ಕಾರ್ಯದರ್ಶಿ ಸುಧೀರ್ ಕಾಟಿಗರ, ನಗರಸಭೆ ಸದಸ್ಯರಾದ ವಿನಾಯಕ್ ಮಾನ್ವಿ, ನಾಗರಾಜ್ ತಳವಾರ್, ಮಾಧುಸಾ ಮೆರವಾಡೆ, ರಾಘವೇಂದ್ರ ಯಳವತ್ತಿ, ಮುತ್ತು ಮುಸಿಗೇರಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ, ಶಂಕರ ಕರಬಿಷ್ಟಿ, ಶಂಕರ್ ಮಲ್ಲಸಮುದ್ರ, ಯುವ ಮೋರ್ಚಾ ಪದಾಧಿಕಾರಿಗಳಾದ ಕಿರಣ್ ಕಲಾಲ, ಪ್ರವೀಣ್ ಹಡಪದ್, ರಾಜು ರೊಟ್ಟಿ, ಸಚಿನ್ ಮಡಿವಾಳರ, ಕೃಷ್ಣ ಚಿಂತಾ, ವಿನಾಯಕ್ ಕಟವಾ, ರಾಹುಲ್ ಸಂಕಣ್ಣವರ್, ಶ್ರೀಕಾಂತ್ ಆದ್ಯಪ್ಪನವರ್ ಮುಂತಾದವರು ಉಪಸ್ಥಿತರಿದ್ದರು. ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ನೆರೆಗಲ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.


Spread the love

LEAVE A REPLY

Please enter your comment!
Please enter your name here